ಕರ್ನಾಟಕ

karnataka

ETV Bharat / international

ದೇಶ ವಿರೋಧಿ ಅಂಶಗಳ ಪ್ರಸಾರದ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಭಾರತಕ್ಕೆ ನೇಪಾಳ ಒತ್ತಾಯ! - ನೇಪಾಳ

ದೇಶದ ರಾಷ್ಟ್ರೀಯ ಭಾವನೆಗೆ ಧಕ್ಕೆ ತರುತ್ತದೆ ಎಂದು ಆರೋಪಿಸಿರುವ ನೇಪಾಳವು, ಕಳೆದ ಗುರುವಾರ ದೂರದರ್ಶನ ಹೊರತುಪಡಿಸಿ ಭಾರತದ ಎಲ್ಲಾ ಖಾಸಗಿ ಸುದ್ದಿ ವಾಹಿನಿಗಳನ್ನು ಪ್ರಸಾರವನ್ನು ಸ್ಥಗಿತಗೊಳಿಸಿತ್ತು. ಈ ವಿಷಯದ ಬಗ್ಗೆ ಭಾರತದಿಂದ ತಕ್ಷಣದ ಪ್ರತಿಕ್ರಿಯೆ ಬಂದಿರಲಿಲ್ಲ. ಇದಾದ ಕೆಲವೇ ದಿನಗಳಲ್ಲಿ ಭಾರತಕ್ಕೆ ನೇಪಾಳದಿಂದ ಈ ಟಿಪ್ಪಣಿ ಬಂದಿದೆ.

Nepal
ನೇಪಾಳ

By

Published : Jul 13, 2020, 5:07 PM IST

ಕಠ್ಮಂಡು/ದೆಹಲಿ :ಭಾರತದ ಕೆಲ ಮಾಧ್ಯಮಗಳಿಂದ ನಕಲಿ, ಆಧಾರರಹಿತ, ಸೂಕ್ಷ್ಮವಲ್ಲದ ಹಾಗೂ ದೇಶ ಮತ್ತು ಅದರ ನಾಯಕತ್ವವನ್ನು ನಿಂದಿಸುವ ಮಾಹಿತಿ ಅಥವಾ ಸುದ್ದಿಯ ಪ್ರಸಾರದ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರವನ್ನು ನೇಪಾಳ ಒತ್ತಾಯಿಸಿದೆ ಎಂದು ಮೂಲಗಳು ತಿಳಿಸಿವೆ.

ನೇಪಾಳವು ಭಾರತಕ್ಕೆ ರಾಜತಾಂತ್ರಿಕ ಟಿಪ್ಪಣಿಯೊಂದನ್ನು ಕಳುಹಿಸಿದೆ. ಟಿಪ್ಪಣಿಯಲ್ಲಿ ಕೇಂದ್ರ ಸರ್ಕಾರಕ್ಕೆ ಕೆಲ ಮನವಿಗಳನ್ನಿಟ್ಟಿದೆ. ದೇಶದ ರಾಷ್ಟ್ರೀಯ ಭಾವನೆಗೆ ಧಕ್ಕೆ ತರುತ್ತದೆ ಎಂದು ಆರೋಪಿಸಿರುವ ನೇಪಾಳವು, ಕಳೆದ ಗುರುವಾರ ದೂರದರ್ಶನ ಹೊರತುಪಡಿಸಿ ಭಾರತದ ಎಲ್ಲಾ ಖಾಸಗಿ ಸುದ್ದಿ ವಾಹಿನಿಗಳ ಪ್ರಸಾರ ಸ್ಥಗಿತಗೊಳಿಸಿತ್ತು. ಈ ವಿಷಯದ ಬಗ್ಗೆ ಭಾರತದಿಂದ ತಕ್ಷಣದ ಪ್ರತಿಕ್ರಿಯೆ ಬಂದಿರಲಿಲ್ಲ. ಇದಾದ ಕೆಲವೇ ದಿನಗಳಲ್ಲಿ ಭಾರತಕ್ಕೆ ನೇಪಾಳದಿಂದ ಈ ಟಿಪ್ಪಣಿ ಬಂದಿದೆ.

ನವದೆಹಲಿಯ ನೇಪಾಳ ರಾಯಭಾರ ಕಚೇರಿ ಮೂಲಕ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಶುಕ್ರವಾರ ಬಂದ ರಾಜತಾಂತ್ರಿಕ ಟಿಪ್ಪಣಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಭಾರತೀಯ ಮಾಧ್ಯಮಗಳ ಒಂದು ಭಾಗದಿಂದ ಪ್ರಸಾರವಾಗುವ ಮಾಹಿತಿಯು ಫೇಕ್​, ಆಧಾರರಹಿತ ಎಂದು ಆರೋಪಿಸಿದೆ. ಅಲ್ಲದೆ ಇದು ನೇಪಾಳ ಮತ್ತು ನೇಪಾಳ ಸರ್ಕಾರಕ್ಕಾದ ನಿಂದನೆ ಎಂದು ನೇಪಾಳ ಪ್ರಧಾನ ಮಂತ್ರಿಯ ಸಹಾಯಕರೊಬ್ಬರು ಹೇಳಿದ್ದಾರೆ.

ಇಂತಹ ಮಾಧ್ಯಮಗಳು ದಾರಿತಪ್ಪಿಸುವ ಮತ್ತು ತಪ್ಪು ಮಾಹಿತಿ ನೀಡುವುದು ಮಾತ್ರಲ್ಲದೆ, ಕನಿಷ್ಠ ಸಾರ್ವಜನಿಕ ಸಭ್ಯತೆಯ ಪ್ರಜ್ಞೆ ದುರ್ಬಲಗೊಳಿಸುತ್ತವೆ ಎಂದು ಟಿಪ್ಪಣಿಯಲ್ಲಿ ತಿಳಿಸಲಾಗಿದೆ. ಭಾರತದ ಕೆಲ ಮಾಧ್ಯಮಗಳ ಈ ಅಶ್ಲೀಲ ಅಂಶಗಳ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಬೇಕು. ಜೊತೆಗೆ ಅಂತಹ ಮಾಹಿತಿಗೆ ಮಾಧ್ಯಮಗಳಲ್ಲಿ ಸ್ಥಳಾವಕಾಶ ಸಿಗದಂತೆ ನೋಡಿಕೊಳ್ಳಬೇಕೆಂದು ಅದು ಭಾರತೀಯ ಅಧಿಕಾರಿಗಳಿಗೆ ವಿನಂತಿಸಿದೆ.

ABOUT THE AUTHOR

...view details