ಕಠ್ಮಂಡು: 2014 ರಿಂದ ಸಾರ್ಕ್ನ ಅಧ್ಯಕ್ಷತೆಯನ್ನ ನೇಪಾಳ ವಹಿಸಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇದೀಗ ಈ ಸ್ಥಾನವನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಲು "ಸಿದ್ಧ ಮತ್ತು ಉತ್ಸುಕವಾಗಿದೆ" ಎಂದು ವಿದೇಶಾಂಗ ಸಚಿವ ಪ್ರದೀಪ್ ಕುಮಾರ್ ಗಯಾವಲಿ ಇಂದು ಪ್ರಕಟಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಎದುರಿಸುತ್ತಿರುವ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು, ಇದನ್ನು ಮಾತುಕತೆ ಮೂಲಕ ಬಗೆಹರಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ನೇಪಾಳ ವಿದೇಶಾಂಗ ಸಚಿವರು ಘೋಷಿಸಿದ್ದಾರೆ. ಅಲ್ಲದೇ ಭಾರತ ಮತ್ತು ನೇಪಾಳ ದೇಶಗಳು ತಮ್ಮ ಜಾಗವನ್ನು ನೆರೆಹೊರೆಯ ದೇಶಗಳಿಗೆ ಬಿಟ್ಟು ಕೊಡಲು ಸಿದ್ಧವಿಲ್ಲ. ಹಾಗೂ ನಾವು ಬೇರೆಯವರೊಂದಿಗೆ ಈ ವಿಷಯದಲ್ಲಿ ಆಟವಾಡುವುದಿಲ್ಲ ಎಂದೂ ಅವರು ಹೇಳಿದ್ದಾರೆ. ನೇಪಾಳ ವಿದೇಶಾಂಗ ಸಚಿವಾಲಯದಲ್ಲಿ ನಡೆದ 'ಸಾಗರಮಾಥ ಸಂಬಾದ್' ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅವರು, ಭಾರತೀಯ ಪತ್ರಕರ್ತರಿಗೆ ಈ ವಿಷಯ ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ, ಪಾಕಿಸ್ತಾನದ ಭಯೋತ್ಪಾದಕ ಕೃತಗಳಿಂದ ಭಾರತ ಅನೇಕ ಭದ್ರತಾ ಸವಾಲುಗಳನ್ನ ಎದುರಿಸುತ್ತಿದೆ. ಭಾರತ ಸಾರ್ಕ್ ಸದಸ್ಯ ರಾಷ್ಟ್ರವಾಗಿದ್ದರೂ, ಸಾರ್ಕ್‌ನಿಂದ ದೂರವಾಗುತ್ತಿದೆ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನದ ಅಧ್ಯಕ್ಷ ಇಮ್ರಾನ್ ಖಾನ್ ಸೇರಿದಂತೆ ಎಲ್ಲಾ ಸಾರ್ಕ್ ರಾಷ್ಟ್ರಗಳ ಮುಖಂಡರಿಗೆ ಮತ್ತು ಪ್ರಾದೇಶಿಕ ಮುಖಂಡರಿಗೆ ಸಾರ್ಕ್ನ ಆತಿಥ್ಯ ವಹಿಸಲು ಆಹ್ವಾನ ನೀಡಿದ್ದೇವೆ. ಇದರಿಂದಾಗಿ ಎಲ್ಲ ರಾಷ್ಟ್ರಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಚರ್ಚೆ ನಡೆಸಬಹುದು ಎಂದು ಗಯಾವಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಲ್ಲ ಸಾರ್ಕ್ ನಾಯಕರು 'ಸಾಗರಮಥ್'ಕ್ಕೆ ಹಾಜರಾಗಿ. ಸಾಂಬಾದ್ (ಸಂಭಾಷಣೆ)ಗೆ ವಿಶ್ವದ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್ಗೆ ಸಾಗರಮಾಥಾ ಎಂದು ಹೆಸರಿಡಲಾಗಿದೆ. ಇದು ಸ್ನೇಹದ ಸಂಕೇತವಾಗಿದೆ ಎಂದು ಗಯಾವಲಿ ಹೇಳಿದರು.
ಕೊನೆಯ ಸಾರ್ಕ್ ಶೃಂಗಸಭೆ ಕಠ್ಮಂಡುವಿನಲ್ಲಿ 2014ರಲ್ಲಿ ನಡೆಯಿತು. ಇದರಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. 2016ರ ಸಾರ್ಕ್ ಶೃಂಗಸಭೆ ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿತ್ತು. ಆದರೆ, ಅದೇ ವರ್ಷ ಸೆಪ್ಟೆಂಬರ್ 18 ರಂದು ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ಭಾರತೀಯ ಸೇನಾ ಶಿಬಿರದ ಮೇಲೆ ಭಯೋತ್ಪಾದಕ ದಾಳಿ ನಡೆದ ಪರಿಣಾಮ ಭಾರತವೂ ಶೃಂಗಸಭೆಯಲ್ಲಿ ಭಾಗವಹಿಸಲಿಲ್ಲ ಎಂದರು.
ಬಾಂಗ್ಲಾದೇಶ, ಭೂತಾನ್ ಮತ್ತು ಅಫ್ಘಾನಿಸ್ತಾನ ಕೂಡ ಇಸ್ಲಾಮಾಬಾದ್ ಸಭೆಯಲ್ಲಿ ಭಾಗವಹಿಸಲು ನಿರಾಕರಿಸಿದ, ನಂತರ ಶೃಂಗಸಭೆಯನ್ನು ನಿಲ್ಲಿಸಲಾಯಿತು. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, 35 ನೇ ಸಾರ್ಕ್ ಚಾರ್ಟರ್ ದಿನದಂದು, ಸಾರ್ವಭೌಮ ಸಮಾನತೆ ಮತ್ತು ಪರಸ್ಪರ ಗೌರವದ ಕಾರ್ಡಿನಲ್ ತತ್ತ್ವಗಳಿಗೆ ಬದ್ಧವಾಗಿರುವುದರಿಂದ, ಪರಿಣಾಮಕಾರಿ ಮತ್ತು ಫಲಿತಾಂಶ - ಆಧಾರಿತ ಪ್ರಾದೇಶಿಕ ಸಹಕಾರವನ್ನು ಸಾಧಿಸಬಹುದು ಎಂದು ಪಾಕಿಸ್ತಾನ ನಂಬಿದೆ ಎಂದು ಖಾನ್ ಹೇಳಿದ್ದರು.
ಡಿಸೆಂಬರ್ 8, 1985 ರಂದು ನಡೆದ ಮೊದಲ ಸಾರ್ಕ್ ಶೃಂಗಸಭೆಯಲ್ಲಿ, ಮಾಲ್ಡೀವ್ಸ್, ಭಾರತ, ಭೂತಾನ್, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ದೇಶಗಳು ಪ್ರಾದೇಶಿಕ ಸಹಕಾರಕ್ಕಾಗಿ ದಕ್ಷಿಣ ಏಷ್ಯಾ ಸಂಘವನ್ನು(ಸಾರ್ಕ್) ಸ್ಥಾಪಿಸಲು ಚಾರ್ಟರ್ಗೆ ಸಹಿ ಹಾಕಿದ್ದವು. 2007 ರಲ್ಲಿ ಅಫ್ಘಾನಿಸ್ತಾನ ಎಂಟನೇ ಸದಸ್ಯ ರಾಷ್ಟ್ರವಾಗಿ ಸೇರಿಕೊಂಡಿತು.