ಕರ್ನಾಟಕ

karnataka

ETV Bharat / international

ರಾಜಕೀಯ ನಕ್ಷೆಯನ್ನು ಪುನಃ ರಚಿಸುವ ಮಸೂದೆ ಅಂಗೀಕರಿಸಿದ ನೇಪಾಳ ಸಂಸತ್ತು.. - Nepal Parliament passes bill

ಮೇ 8 ರಂದು ಉತ್ತರಾಖಂಡದ ಧಾರ್ಚುಲಾದೊಂದಿಗೆ ಲಿಪುಲೆಖ್ ಪಾಸ್‌ನ ಸಂಪರ್ಕಿಸುವ 80 ಕಿ.ಮೀ ಉದ್ದದ ಕಾರ್ಯತಂತ್ರದ ನಿರ್ಣಾಯಕ ರಸ್ತೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದ ನಂತರ ಭಾರತ ಮತ್ತು ನೇಪಾಳ ನಡುವಿನ ಸಂಬಂಧ ಬಿಗಡಾಯಿಸಿತು.

ನೇಪಾಳ ಸಂಸತ್ತುNepal Parliament passes bill to redraw political map
ನೇಪಾಳ ಸಂಸತ್ತು

By

Published : Jun 13, 2020, 6:58 PM IST

ಕಠ್ಮಂಡು: ನೇಪಾಳ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ದೇಶದ ರಾಜಕೀಯ ನಕ್ಷೆ ಪರಿಷ್ಕರಿಸಲು ಸರ್ಕಾರವು ಮಂಡಿಸಿದ ಪ್ರಮುಖ ಸಂವಿಧಾನ ತಿದ್ದುಪಡಿ ಮಸೂದೆಗೆ ಅಂಗೀಕಾರ ದೊರೆತಿದೆ.

ಜೂನ್ 9 ರಂದು ಹೊಸ ನಕ್ಷೆ ಅನುಮೋದಿಸಲು ಮಸೂದೆಯನ್ನು ಪರಿಗಣಿಸುವ ಪ್ರಸ್ತಾಪವನ್ನು ಸಂಸತ್ತು ಸರ್ವಾನುಮತದಿಂದ ಅಂಗೀಕರಿಸಿತು. ಮೇ 8 ರಂದು ಉತ್ತರಾಖಂಡದ ಧಾರ್ಚುಲಾದೊಂದಿಗೆ ಲಿಪುಲೆಖ್ ಪಾಸ್‌ನ ಸಂಪರ್ಕಿಸುವ 80 ಕಿ.ಮೀ ಉದ್ದದ ಕಾರ್ಯತಂತ್ರದ ನಿರ್ಣಾಯಕ ರಸ್ತೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದ ನಂತರ ಭಾರತ ಮತ್ತು ನೇಪಾಳ ನಡುವಿನ ಸಂಬಂಧ ಬಿಗಡಾಯಿಸಿತು.

ಓದಿ:ಗಡಿ ವಿವಾದದ ಮಧ್ಯೆ ನಕ್ಷೆ ಬದಲಿಸಲು ಅನುಮೋದನೆ ಕೊಟ್ಟ ನೇಪಾಳ ಸಂಸತ್ತು

ರಸ್ತೆ ಉದ್ಘಾಟನೆಗೆ ನೇಪಾಳ ತೀವ್ರವಾಗಿ ಪ್ರತಿಕ್ರಿಯಿಸಿ, ಅದು ನೇಪಾಳ ಪ್ರದೇಶದ ಮೂಲಕ ಹಾದು ಹೋಯಿತು ಎಂದು ಹೇಳಿ ಕೊಂಡಿದೆ. ರಸ್ತೆ ಸಂಪೂರ್ಣ ತನ್ನ ಭೂಪ್ರದೇಶದಲ್ಲಿದೆ ಎಂದು ಪ್ರತಿಪಾದಿಸುವುದನ್ನು ಭಾರತ ತಿರಸ್ಕರಿಸಿತು.

ಕಠ್ಮಂಡು ಕಳೆದ ತಿಂಗಳು ದೇಶದ ಪರಿಷ್ಕೃತ ರಾಜಕೀಯ ಮತ್ತು ಆಡಳಿತಾತ್ಮಕ ನಕ್ಷೆಯನ್ನು ಆಯಕಟ್ಟಿನ ಪ್ರಮುಖ ಪ್ರದೇಶಗಳಾದ ಲಿಪುಲೆಖ್, ಕಲಾಪಣಿ ಮತ್ತು ಲಿಂಪಿಯಾಡುರಾ ಮೇಲೆ ಹಕ್ಕು ಸ್ಥಾಪಿಸಿತು. ಆದರೆ, ಈ ಮೂರು ಪ್ರದೇಶಗಳು ತಮಗೆ ಸೇರಿದವು ಎಂದು ಭಾರತವು ಸಮರ್ಥಿಸುತ್ತಿದೆ.

ABOUT THE AUTHOR

...view details