ಕರ್ನಾಟಕ

karnataka

ETV Bharat / international

ಚೀನಾ - ನೇಪಾಳ ಗಡಿ ವಿವಾದ: ಸಮಿತಿ ರಚಿಸಿದ ಬಹದ್ದೂರ್ ದೇವು ಬಾ ಸರ್ಕಾರ - ಹಮ್ಲಾ ಜಿಲ್ಲೆ

ಚೀನಾದೊಂದಿಗಿನ ಗಡಿವಿವಾದ ಬಗೆಹರಿಸುವ ನಿಟ್ಟಿನಲ್ಲಿ ನೇಪಾಳ ಸರ್ಕಾರ ಸಮಿತಿ ರಚಿಸಿದೆ.

ಚೀನಾ-ನೇಪಾಳ
ಚೀನಾ-ನೇಪಾಳ

By

Published : Sep 2, 2021, 9:21 AM IST

ಕಠ್ಮಂಡು: ಚೀನಾ - ನೇಪಾಳ ಗಡಿ ವಿವಾದವನ್ನು ಬಗೆಹರಿಸುವ ಸಲುವಾಗಿ ನೇಪಾಳ ಸರ್ಕಾರ ಸಮಿತಿಯೊಂದನ್ನು ರಚಿಸಿದೆ. ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಸಮಿತಿ ರಚನೆ ನಿರ್ಧಾರ ಕೈಗೊಳ್ಳಲಾಗಿದೆ.

ಬುಧವಾರ ತಡರಾತ್ರಿ ನಡೆದ ಮಂತ್ರಿ ಮಂಡಲ ಸಭೆಯಲ್ಲಿ, ಲಿಮಿ ಲ್ಯಾಪ್ಚಾದಿಂದ ಹಮ್ಲಾ ಜಿಲ್ಲೆಯ ನಮಖಾ ಗ್ರಾಮ ಪುರಸಭೆಯ ಗಡಿಯ ವಿವಾದವನ್ನು ಅಧ್ಯಯನ ಮಾಡಲು ಸಮಿತಿ ರಚಿಸಲಾಗಿದೆ.

ಭೂಮಾಪನ ಇಲಾಖೆ, ನೇಪಾಳ ಪೊಲೀಸ್​, ಸಶಸ್ತ್ರ ಪೊಲೀಸ್ ಮತ್ತು ಗಡಿ ತಜ್ಞರನ್ನು ಒಳಗೊಂಡ ಸಮಿತಿಯನ್ನು ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿಯವರ ನೇತೃತ್ವದಲ್ಲಿ ರಚಿಸಲಾಗಿದೆ ಎಂದು ಕಾನೂನು ಸಚಿವ ಜ್ಞಾನೇಂದ್ರ ಬಹದ್ದೂರ್ ಕರ್ಕಿ ಹೇಳಿದರು.

ಚೀನಾ - ನೇಪಾಳಿ ಭೂಮಿಯನ್ನು ಅತಿಕ್ರಮಿಸಿದೆ ಮತ್ತು ಕಳೆದ ವರ್ಷ ಹುಮ್ಲಾದಲ್ಲಿ ಒಂಬತ್ತು ಕಟ್ಟಡಗಳನ್ನು ನಿರ್ಮಿಸಿದೆ ಎಂದು ಎಂದು ಸಚಿವ ಕರ್ಕಿ ಹೇಳಿದ್ದಾರೆ. ಕೆ.ಪಿ. ಶರ್ಮಾ ಓಲಿ ಆಡಳಿತದ ಸಮಯದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಚೀನಾ ಗಡಿಯನ್ನು ಅತಿಕ್ರಮಿಸಿಲ್ಲ ಎಂದು ಹೇಳಿತ್ತು.

ಇದನ್ನೂ ಓದಿ: ಹವಾಮಾನ ಮಾತುಕತೆಗೆ ‘ವೈಷಮ್ಯ’ ಅಡ್ಡಿಯಾಗಬಹುದು: ಅಮೆರಿಕಕ್ಕೆ ಚೀನಾ​ ಎಚ್ಚರಿಕೆ

ABOUT THE AUTHOR

...view details