ಕರ್ನಾಟಕ

karnataka

ETV Bharat / international

UPDATE| ನೇಪಾಳದಲ್ಲಿ ಭಾರಿ ಮಳೆ: ಪ್ರವಾಹದಿಂದಾಗಿ 10 ಸಾವು, ಹಲವರು ನಾಪತ್ತೆ

ನೇಪಾಳದ ವಿವಿಧ ಜಿಲ್ಲೆಗಳಲ್ಲಿ ಪ್ರವಾಹಕ್ಕೆ ಸಿಲುಕಿ 10 ಮಂದಿ ಸಾವಿಗೀಡಾಗಿದ್ದು, 40 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ.

Nepal Flood: 2 dead, 20 missing
ನೇಪಾಳದಲ್ಲಿ ಪ್ರವಾಹ

By

Published : Jul 10, 2020, 12:03 PM IST

Updated : Jul 10, 2020, 2:01 PM IST

ಕಾಠ್ಮಂಡು (ನೇಪಾಳ): ಸುರಿದ ಭಾರಿ ಮಳೆಯಿಂದಾಗಿ ಸಂಭವಿಸಿದ ಪ್ರವಾಹಕ್ಕೆ ವಿವಿಧ ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 10 ಮಂದಿ ಬಲಿಯಾಗಿದ್ದು, 40ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ.

ಪ್ರಮುಖ ನದಿಗಳ ಜಲಾನಯನ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಕಾರಣ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಈ ನೆರೆಯಲ್ಲಿ ಹಲವಾರು ಮನೆಗಳು ಕೊಚ್ಚಿಹೋಗಿವೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಕಾರಣ ಗ್ರಾಮಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ತಗ್ಗು ಪ್ರದೇಶ ಗ್ರಾಮಗಳ ಜನ-ಜಾನುವಾರುಗಳು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಕಮ್ಲಾ, ಬಾಗ್ಮತಿ, ಗಂಡಕ್ ಮತ್ತು ಸಿ ನದಿಗಳ ಸುತ್ತಮುತ್ತ ಸುರಿಯುತ್ತಿರುವ ಮಳೆಯ ಪ್ರಮಾಣ ಹೆಚ್ಚಾಗಿದೆ.

ಉಕ್ಕಿ ಹರಿಯುತ್ತಿರುವ ನದಿ

ಬಿಹಾರದ ತಗ್ಗು ಪ್ರದೇಶಗಳ ಜನರು ಆತಂಕ ಪಡಬೇಡಿ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ. ಪ್ರವಾಹವನ್ನು ಎದುರಿಸಲು ಯಾವುದೇ ಸಂದರ್ಭದಲ್ಲೂ ಸಿದ್ದ ಎಂದು ಸರ್ಕಾರ ಹೇಳಿದೆ.

Last Updated : Jul 10, 2020, 2:01 PM IST

ABOUT THE AUTHOR

...view details