ಕಠ್ಮಂಡು(ನೇಪಾಳ):ಭೀಕರ ಅಪಘಾತವೊಂದರಲ್ಲಿ ಬಸ್ನಲ್ಲಿದ್ದ ಸುಮಾರು 32 ಮಂದಿ ಸಾವನ್ನಪ್ಪಿರುವ ಘಟನೆ ನೇಪಾಳದ ಮುಗು ಜಿಲ್ಲೆಯಲ್ಲಿ ನಡೆದಿದೆ. ಮುಗು ಜಿಲ್ಲಾ ಕೇಂದ್ರವಾದ ಗಮ್ಗಡಿ ನೇಪಾಳ್ಗಂಜ್ ಎಂಬಲ್ಲಿಗೆ ಬಸ್ ತೆರಳುತ್ತಿತ್ತು ಎಂದು ತಿಳಿದುಬಂದಿದೆ.
ಈ ಬಸ್ನಲ್ಲಿ ವಲಸೆ ಕಾರ್ಮಿಕರು ಹಾಗೂ ಕೆಲವು ವಿದ್ಯಾರ್ಥಿಗಳೂ ಇದ್ದು, ನೇಪಾಳದ ಪ್ರಮುಖ ಹಬ್ಬವಾದ ದಶಾಯಿನ್ಗೆ ತೆರಳುತ್ತಿದ್ದರು. ಈ ವೇಳೆ 300 ಮೀಟರ್ಗೂ ಹೆಚ್ಚು ಆಳಕ್ಕೆ ಬಸ್ ಉರುಳಿ ಬಿದ್ದಿದೆ. ಪರಿಣಾಮ, ಸ್ಥಳದಲ್ಲೇ 22 ಮಂದಿ ಪ್ರಾಣ ಕಳೆದುಕೊಂಡಿದ್ದು, ಆಸ್ಪತ್ರೆಗೆ ದಾಖಲಾದ ನಂತರ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.