ಕರ್ನಾಟಕ

karnataka

ETV Bharat / international

ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್​ ಪಲ್ಟಿ: 23 ಜನರ ದುರ್ಮರಣ - Balochistan road accident

ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್​ ಪಲ್ಟಿಯಾಗಿ 23 ಜನರು ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ.

pakistan accident
ಪಾಕಿಸ್ತಾನ ರಸ್ತೆ ಅಪಘಾತ

By

Published : Jun 11, 2021, 6:56 PM IST

ಬಲೂಚಿಸ್ತಾನ್: ಬಸ್​ ಪಲ್ಟಿಯಾಗಿ ಸುಮಾರು 23 ಜನರು ಮೃತಪಟ್ಟಿರುವ ಘಟನೆ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಖುಜ್ದಾರ್ ಜಿಲ್ಲೆಯಲ್ಲಿ ನಡೆದಿದೆ.

ಅಪಘಾತದಲ್ಲಿ ಹಲವು ಜನರು ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಇದಕ್ಕೂ ಮೊದಲು ಖುಜ್ದಾರ್ ಜಿಲ್ಲಾಧಿಕಾರಿ ಬಶೀರ್ ಅಹ್ಮದ್ ದುರಂತದಲ್ಲಿ 18 ಮಂದಿ ಮೃತಪಟ್ಟಿದ್ದಾರೆಂದು ಹೇಳಿದ್ದರು. ಆದರೆ ಈಗ ಖುಜ್ದಾರ್ ಸಿವಿಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಇಸ್ಮಾಯಿಲ್ ಬಜೋಯಿ, ಸಾವಿನ ಸಂಖ್ಯೆ 23ಕ್ಕೆ ಏರಿಕೆಯಾಗಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಮೊಬೈಲ್ ಫೋನ್​​ಗಾಗಿ ರಸ್ತೆ ಮೇಲೆ ಬಿದ್ದು, ಪ್ರಾಣ ಕಳೆದುಕೊಂಡ ಯುವತಿ!

ಬಲೂಚಿಸ್ತಾನದ ವಾಧ್‌ನಿಂದ ಸಿಂಧ್‌ನ ದದುಗೆ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್​ ಇದಾಗಿದ್ದು, ಸ್ಥಳದಲ್ಲೇ 15 ಜನರು ಪ್ರಾಣ ಬಿಟ್ಟಿದ್ದರು. ಜೂನ್​ 8ರಂದು ಸಿಂಧ್ ಪ್ರಾಂತ್ಯದಲ್ಲಿ ಎರಡು ಪ್ರಯಾಣಿಕರ ರೈಲುಗಳು ಡಿಕ್ಕಿ ಹೊಡೆದ ಪರಿಣಾಮ 62 ಮಂದಿ ಸಾವನ್ನಪ್ಪಿದ್ದರು.

ABOUT THE AUTHOR

...view details