ಕರ್ನಾಟಕ

karnataka

ETV Bharat / international

ಹೊಸ ಅಭಿವೃದ್ಧಿ ಗುರಿಗಳನ್ನು ರೂಪಿಸಲು ಹೊಸ ಕಾಂಗ್ರೆಸ್ ತೆರೆದ ಉ.ಕೊರಿಯಾ - ಕಿಮ್ ಜೊಂಗ್ ಉನ್ ಸುದ್ದಿ

ಉತ್ತರ ಕೊರಿಯಾದ ನಾಯಕ ಕಿಮ್ ಜೊಂಗ್ ಉನ್ ವರ್ಕರ್ಸ್ ಪಾರ್ಟಿ ಕಾಂಗ್ರೆಸನ್ನು ಪ್ರಾರಂಭಿಸಿದ್ದು, ಸಾವಿರಾರು ಪ್ರತಿನಿಧಿಗಳು ಹಾಜರಿದ್ದರು.

kim
kim

By

Published : Jan 6, 2021, 11:49 AM IST

ಸಿಯೋಲ್ (ಉತ್ತರ ಕೊರಿಯಾ):ನೀತಿ ವೈಫಲ್ಯತೆ ತಪ್ಪಿಸಲು ಮತ್ತು ಹೊಸ ಅಭಿವೃದ್ಧಿ ಗುರಿಗಳನ್ನು ರೂಪಿಸಲು ಉತ್ತರ ಕೊರಿಯಾದ ನಾಯಕ ಕಿಮ್ ಜೊಂಗ್ ಉನ್ ಆಡಳಿತ ಪಕ್ಷದ ಕಾಂಗ್ರೆಸ್ ತೆರೆದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಪಯೋಂಗ್ಯಾಂಗ್‌ನಲ್ಲಿ ವರ್ಕರ್ಸ್ ಪಾರ್ಟಿ ಕಾಂಗ್ರೆಸ್​ ಅನ್ನು ಉತ್ತರ ಕೊರಿಯಾ ಪ್ರಾರಂಭಿಸಿದ್ದು, ಸಾವಿರಾರು ಪ್ರತಿನಿಧಿಗಳು ಹಾಜರಿದ್ದರು ಎಂದು ಕೊರಿಯನ್ ಕೇಂದ್ರ ಸುದ್ದಿ ಸಂಸ್ಥೆ ವರದಿ ಮಾಡಿದೆ.

2016 ರ ಕಾಂಗ್ರೆಸ್​ನಲ್ಲಿ ನಿಗದಿಪಡಿಸಿದ ಹಿಂದಿನ ರಾಜ್ಯ ಅಭಿವೃದ್ಧಿ ಗುರಿಗಳನ್ನು ಬಹುತೇಕ ಎಲ್ಲ ಕ್ಷೇತ್ರಗಳಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಪೂರೈಸಲಾಗಿಲ್ಲ ಎಂದು ಕಿಮ್ ಜೊಂಗ್ ಉನ್ ಹೇಳಿದ್ದಾರೆ.

ಪ್ರಸ್ತುತ ಕಾಂಗ್ರೆಸ್‌ನಲ್ಲಿ ಹೊಸ ಪಂಚವಾರ್ಷಿಕ ಅಭಿವೃದ್ಧಿ ಯೋಜನೆಯನ್ನು ರೂಪಿಸುವುದಾಗಿ ಉತ್ತರ ಕೊರಿಯಾ ಹೇಳಿದೆ.

ABOUT THE AUTHOR

...view details