ಯಾಂಗೊನ್ (ಮ್ಯಾನ್ಮಾರ್): ಮ್ಯಾನ್ಮಾರ್‌ನಲ್ಲಿ ಮಿಲಿಟರಿ ದಂಗೆಯನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯು ಎರಡು ತಿಂಗಳುಗಳನ್ನು ಪೂರೈಸಿದೆ. ಮ್ಯಾನ್ಮಾರ್‌ನಲ್ಲಿ ಸೇನೆ ಪ್ರತಿಭಟನಾನಿರತರ ಮೇಲೆ ದಿನೇ ದಿನೆ ತನ್ನ ದಾಳಿಯನ್ನ ತೀವ್ರಗೊಳಿಸುತ್ತಿದೆ.
ಭದ್ರತಾ ಪಡೆಗಳು ಹಿಂಸಾಚಾರವನ್ನು ಹೆಚ್ಚಿಸಿವೆ ಮತ್ತು ಪ್ರತಿಭಟನಾಕಾರರನ್ನು ಹೊಡೆದುರುಳಿಸಿವೆ. ಮ್ಯಾನ್ಮಾರ್‌ನಲ್ಲಿ ಮಿಲಿಟರಿ ದಂಗೆ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದ್ದು, ಪ್ರತಿಭಟನಾ ಮೆರವಣಿಗೆ ಮೇಲೆ ಭದ್ರತಾ ಪಡೆಗಳು ಆಶ್ರುವಾಯು, ರಬ್ಬರ್ ಗಂಡುಗಳನ್ನು, ಜೀವಂತ ಗುಂಡುಗಳನ್ನು ಸಿಡಿಸುತ್ತಿದ್ದಾರೆ.
ಆಂಗ್ ಸಾನ್ ಸೂ ಕಿ ನೇತೃತ್ವದ ಎನ್ಎಲ್ಡಿ ಸರ್ಕಾರವನ್ನು ಫೆಬ್ರವರಿ 1 ರಂದು ತೆಗೆದು ಹಾಕಲಾಗಿದ್ದು, ಮ್ಯಾನ್ಯಾರ್ನಲ್ಲಿ ಸದ್ಯ ಮಿಲಿಟರಿ ಆಡಳಿತ ಜಾರಿಗೆ ಬಂದಿದೆ. ಮಿಲಿಟರಿ ಆಡಳಿತದ ಮೇಲೆ ಪಾಶ್ಚಿಮಾತ್ಯ ರಾಷ್ಟ್ರಗಳು ವಿಧಿಸಿರುವ ಅಂತಾರಾಷ್ಟ್ರೀಯ ಖಂಡನೆ ಮತ್ತು ನಿರ್ಬಂಧಗಳು ಶಾಂತಿಯನ್ನು ಪುನಃ ಸ್ಥಾಪಿಸುವಲ್ಲಿ ವಿಫಲವಾಗಿವೆ.
ದೇಶದ ಅತಿದೊಡ್ಡ ನಗರವಾದ ಯಾಂಗೊನ್‌ನಲ್ಲಿ, ಇದುವರೆಗೆ ಕೊಲ್ಲಲ್ಪಟ್ಟ 500ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಗೌರವಿಸುವ ಹಾಡುಗಳನ್ನು ಹಾಡಲು ಯುವಕರ ಗುಂಪು ಗುರುವಾರ ಸೂರ್ಯೋದಯದ ನಂತರ ಜಮಾಯಿಸಿತು. ನಂತರ ಅವರು ಜುಂಟಾದ ಪತನ, ಪದಚ್ಯುತ ನಾಯಕ ಆಂಗ್ ಸಾನ್ ಸೂಕಿ ಬಿಡುಗಡೆ ಮತ್ತು ಪ್ರಜಾಪ್ರಭುತ್ವದ ಮರಳುವಿಕೆ ಕುರಿತು ಘೋಷಣೆಗಳನ್ನು ಕೂಗುತ್ತಾ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಮಾಂಡಲೆ ಮತ್ತು ಇತರಡೆಗಳಲ್ಲಿ ಪ್ರತಿಭಟನೆ ನಡೆದವು.
ಆಗ್ನೇಯ ಏಷ್ಯಾದ ರಾಷ್ಟ್ರದಲ್ಲಿನ ಬಿಕ್ಕಟ್ಟು ಕಳೆದ ವಾರದಲ್ಲಿ ತೀವ್ರಗೊಂಡಿದೆ. ಪ್ರತಿಭಟನಾಕಾರರ ಸಂಖ್ಯೆಯಲ್ಲಿ ಮತ್ತು ಥಾಯ್ಲೆಂಡ್ ಗಡಿಯುದ್ದಕ್ಕೂ ತಮ್ಮ ತಾಯ್ನಾಡಿನಲ್ಲಿ ಕರೆನ್ ಜನಾಂಗೀಯ ಅಲ್ಪಸಂಖ್ಯಾತರ ಗೆರಿಲ್ಲಾ ಪಡೆಗಳ ವಿರುದ್ಧ ಮಿಲಿಟರಿ ವೈಮಾನಿಕ ದಾಳಿ ನಡೆಸಿದರು. ದಶಕಗಳ ಕ್ರೂರ ಮಿಲಿಟರಿ ಆಡಳಿತದ ನಂತರ ಹೆಚ್ಚಿನ ಪ್ರಜಾಪ್ರಭುತ್ವದ ಕಡೆಗೆ ನಿಧಾನವಾಗಿ ಪ್ರಗತಿ ಸಾಧಿಸುತ್ತಿದ್ದ ದೇಶಕ್ಕೆ ಸಂಪೂರ್ಣ ಹಿಮ್ಮುಖವಾಗುತ್ತಿರುವ ನಾಗರಿಕ ಯುದ್ಧದ ಸಾಧ್ಯತೆಯನ್ನು ದೇಶ ಎದುರಿಸುತ್ತಿದೆ ಎಂದು ಮ್ಯಾನ್ಮಾರ್‌ನ ಯು.ಎನ್ ವಿಶೇಷ ರಾಯಭಾರಿ ಎಚ್ಚರಿಸಿದ್ದಾರೆ.