ನಾಯ್ಪಿಟಾವ್ (ಮ್ಯಾನ್ಮಾರ್) : ದೇಶದ ಮೇಲೆ ಮಿಲಿಟರಿ ಒಂದು ವರ್ಷದವರೆಗೆ ಹಿಡಿತ ಸಾಧಿಸುತ್ತದೆ ಎಂದು ಮಿಲಿಟರಿ ಟೆಲಿವಿಷನ್ ಹೇಳಿದೆ.
ಮಿಲಿಟರಿ ಒಡೆತನದ ಮೈವಾಡಿ ಟಿವಿಯಲ್ಲಿ ನಿರೂಪಕರೊಬ್ಬರು ಈ ಘೋಷಣೆ ಮಾಡಿದ್ದಾರೆ. ಮಿಲಿಟರಿ ರಚಿಸಿರುವ ಸಂವಿಧಾನದ ಒಂದು ಭಾಗವನ್ನು ಉಲ್ಲೇಖಿಸಿದ ಅವರು, ತುರ್ತು ಸಂದರ್ಭದಲ್ಲಿ ದೇಶವನ್ನು ಮಿಲಿಟರಿ ಆಳ್ವಿಕೆ ಮಾಡುತ್ತದೆ. ಸೇನೆಯ ಹಕ್ಕುಗಳ ಬಗ್ಗೆ ಕಾರ್ಯ ನಿರ್ವಹಿಸಲು ಮತ್ತು ಕೊರೊನಾ ವೈರಸ್ ಬಿಕ್ಕಟ್ಟಿನ ವೇಳೆ ಚುನಾವಣೆಯನ್ನು ಮುಂದೂಡುವಲ್ಲಿ ಸರ್ಕಾರ ವಿಫಲವಾದ ಕಾರಣ ದೇಶದಲ್ಲಿ ಮಿಲಿಟರಿ ಆಡಳಿತ ಶುರುವಾಗಿದೆ. ಅಲ್ಲದೆ, ಶೀಘ್ರದಲ್ಲೇ ಹೊಸ ಸಂಸತ್ತಿನ ಅಧಿವೇಶನ ಪ್ರಾರಂಭವಾಗಲಿದೆ ಎಂದರು.