ನಾಯ್ಪಿಟಾವ್: ಮ್ಯಾನ್ಮಾರ್‌ನ ಯಾಂಗೊನ್ ಪ್ರದೇಶದ ಹೆಚ್ಚಿನ ಪ್ರದೇಶಗಳಲ್ಲಿ ಮುಂಗಡ ಮತಗಳನ್ನು ಎಣಿಕೆ ಮಾಡುತ್ತಿದ್ದು, ಆಂಗ್ ಸಾನ್ ಸೂ ಕಿ ಅವರ ನ್ಯಾಷನಲ್ ಲೀಗ್ ಆಫ್ ಡೆಮಾಕ್ರಸಿ (ಎನ್‌ಎಲ್‌ಡಿ) ಅಭ್ಯರ್ಥಿಗಳು ಸಾರ್ವತ್ರಿಕ ಚುನಾವಣೆಯಲ್ಲಿ ಗರಿಷ್ಠ ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದಾರೆ.
ಮ್ಯಾನ್ಮಾರ್ನಲ್ಲಿ ಮತ ಎಣಿಕೆ ಶುರು: ಆಂಗ್ ಸಾನ್ ಸೂಕಿ ಪಕ್ಷಕ್ಕೆ ಭಾರಿ ಮುನ್ನಡೆ - ಆಂಗ್ ಸಾನ್ ಸೂ ಕಿ ಲೇಟೆಸ್ಟ್ ನ್ಯೂನ್
ಮ್ಯಾನ್ಮಾರ್ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಎನ್‌ಎಲ್‌ಡಿ ಪಕ್ಷ ಮುನ್ನಡೆ ಸಾಧಿಸಿದೆ. ಈಗಾಗಲೇ ಮತ ಎಣಿಕೆ ಪ್ರಕ್ರಿಯೆ ಶುರುವಾಗಿದ್ದು, ನ್ಯಾಷನಲ್ ಲೀಗ್ ಆಫ್ ಡೆಮಾಕ್ರಸಿ ಮೇಲುಗೈ ಸಾಧಿಸಿದೆ.
![ಮ್ಯಾನ್ಮಾರ್ನಲ್ಲಿ ಮತ ಎಣಿಕೆ ಶುರು: ಆಂಗ್ ಸಾನ್ ಸೂಕಿ ಪಕ್ಷಕ್ಕೆ ಭಾರಿ ಮುನ್ನಡೆ Aung San Suu Kyi](https://etvbharatimages.akamaized.net/etvbharat/prod-images/768-512-9483217-thumbnail-3x2-brm.jpg)
ಆಂಗ್ ಸಾನ್ ಸೂ ಕಿ
ಈ ಬಗ್ಗೆ ವರದಿ ಮಾಡಿರುವ ಮ್ಯಾನ್ಮರ್ ಪತ್ರಿಕೆಯೊಂದು, 'ಎನ್‌ಎಲ್‌ಡಿ ಹೆಚ್ಚಿನ ಮುಂಗಡ ಮತಗಳಲ್ಲಿ ಪ್ರಾಬಲ್ಯ ಸಾಧಿಸಿದೆ. ಇಲ್ಲಿಯವರೆಗೆ ಎನ್‌ಎಲ್‌ಡಿ 200 ಕ್ಕೂ ಹೆಚ್ಚು ಮತಗಳನ್ನು ಪಡೆದಿದ್ರೆ, ಇತರ ಪಕ್ಷಗಳು 20 ರಿಂದ 30 ಮತಗಳನ್ನು ಪಡೆದಿವೆ' ಎಂದಿದೆ.
ಐದು ದಶಕಗಳ ಮಿಲಿಟರಿ ಆಡಳಿತದ ಅಂತ್ಯದ ನಂತರ ಮ್ಯಾನ್ಮಾರ್ನಲ್ಲಿ ಎರಡನೇ ಬಾರಿಗೆ ಸಾರ್ವತ್ರಿಕ ಚುನಾವಣೆ ನಡೆದಿದೆ. 2015ರಲ್ಲಿ ನಡೆದ ಚುನಾವಣೆಯಲ್ಲಿ ಎನ್‌ಎಲ್‌ಡಿ ಭರ್ಜರಿ ಗೆಲುವು ಸಾಧಿಸಿತ್ತು.