ಕರ್ನಾಟಕ

karnataka

ETV Bharat / international

ಮ್ಯಾನ್ಮಾರ್​ ಉದ್ವಿಗ್ನ.. ಪೊಲೀಸರು ಸೇರಿದಂತೆ ಭಾರತಕ್ಕೆ ವಲಸೆ ಬರುತ್ತಿರುವ ಪ್ರಜೆಗಳು!

ಮ್ಯಾನ್ಮಾರ್​ನಲ್ಲಿ ಮಿಲಿಟರಿ ಆಡಳಿತ ನಡೆಯುತ್ತಿದ್ದು, ಅಲ್ಲಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಈಗ ಅಲ್ಲಿನ ಪ್ರಜೆಗಳು ಮತ್ತು ಪೊಲೀಸರು ಕ್ರಮೇಣವಾಗಿ ಭಾರತಕ್ಕೆ ಕಾಲಿಡುತ್ತಿದ್ದಾರೆ.

Myanmar cops entered india  civilians cross into India  Myanmar cops seek refuge in Mizoram  military coup  Myanmar civilians seeking refuge in Mizoram  ಭಾರತಕ್ಕೆ ವಲಸೆ ಬರುತ್ತಿರುವ ಪ್ರಜೆಗಳು  ಭಾರತಕ್ಕೆ ವಲಸೆ ಬರುತ್ತಿರುವ ಮ್ಯಾನ್ಮಾರ್​ ಪ್ರಜೆಗಳು  ಪೊಲೀಸರು ಸೇರಿದಂತೆ ಭಾರತಕ್ಕೆ ವಲಸೆ ಬರುತ್ತಿರುವ ಮ್ಯಾನ್ಮಾರ್​ ಪ್ರಜೆಗಳು  ಮ್ಯಾನ್ಮಾರ್​ ಉದ್ವಿಗ್ನ
ಪೊಲೀಸರು ಸೇರಿದಂತೆ ಭಾರತಕ್ಕೆ ವಲಸೆ ಬರುತ್ತಿರುವ ಪ್ರಜೆಗಳು

By

Published : Mar 5, 2021, 6:55 AM IST

ಐಜಾಲ್: ಮ್ಯಾನ್ಮಾರ್​ನಲ್ಲಿ ಪರಿಸ್ಥಿತಿ ಅಷ್ಟೊಂದು ಚೆನ್ನಾಗಿಲ್ಲ. ಈಗ ಅಲ್ಲಿ ಸರ್ಕಾರ ಉರುಳಿದ್ದು, ಮಿಲಿಟರಿ ಆಡಳಿತ ಜಾರಿಯಾಗಿದೆ.

ಮ್ಯಾನ್ಮಾರ್​ನಲ್ಲಿ ಮಿಲಿಟರಿ ಆಡಳಿತವೂ ಒಂದು ವರ್ಷ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಈಗ ಅಲ್ಲಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ಮಿಲಿಟರಿ ಪಡೆ ವಿರುದ್ಧ ಜನರು ದಂಗೆಯೆದ್ದಿದ್ದಾರೆ. ಹೀಗಾಗಿ ಜನ ಮತ್ತು ಮಿಲಿಟರಿ ಪಡೆ ನಡುವೆ ಒಂದು ರೀತಿ ಯುದ್ಧವೇ ಶುರುವಾಗಿದೆ.

ಮ್ಯಾನ್ಮಾರ್​ನಲ್ಲಿ ಪರಿಸ್ಥಿತಿ ತಿಳಿಯಾಗಿಲ್ಲ ವಾಗಿರುವುದರಿಂದ ಕೆಲವು ಮ್ಯಾನ್ಮಾರ್ ಪೊಲೀಸ್ ಸಿಬ್ಬಂದಿ ಮತ್ತು ನಾಗರಿಕರು ಭಾರತಕ್ಕೆ ಕಾಲಿಟ್ಟಿದ್ದಾರೆ ಎಂದು ಗಡಿಯಲ್ಲಿರುವ ಅಧಿಕಾರಿಗಳು ಖಚಿತ ಪಡಿಸಿದ್ದಾರೆ.

ಗಡಿಯಲ್ಲಿರುವ ಮಿಜೋರಾಂನಲ್ಲಿ ಮ್ಯಾನ್ಮಾರ್​ ಪೊಲೀಸರು ಮತ್ತು ಪ್ರಜೆಗಳು ಆಶ್ರಯ ಪಡೆಯುತ್ತಿದ್ದಾರೆ ಎಂದು ಗ್ರಾಮಸ್ಥರು ಗುರುವಾರ ತಿಳಿಸಿದ್ದಾರೆ.

ಬುಧವಾರ ಮಿಲಿಟರಿ ದಂಗೆ ಪೀಡಿತ ಮ್ಯಾನ್ಮಾರ್‌ನ ಮೂರು ಜನರು ಗಡಿಯನ್ನು ಪ್ರವೇಶಿಸಿದ್ದರು. ಇನ್ನೂ ಕೆಲವರು ಗುರುವಾರ ಗಡಿ ದಾಟಿದ್ದಾರೆ. ಅವರಿಗೆಲ್ಲರಿಗೂ ಕೋವಿಡ್ ಪರೀಕ್ಷೆಗಳ ನಂತರ ಲುಂಗ್ಕಾವ್ಲ್ ಗ್ರಾಮದ ಸಮುದಾಯ ಭವನದಲ್ಲಿ ಆಶ್ರಯ ನೀಡಲಾಗಿದೆ. ಈ ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಉನ್ನತ ಪ್ರಾಧಿಕಾರಕ್ಕೆ ತಿಳಿಸಲಾಗಿದೆ. ಒಳನುಗ್ಗುವವರ ಸಂಖ್ಯೆಯನ್ನು ಬಹಿರಂಗಪಡಿಸಲು ಜಿಲ್ಲಾಧಿಕಾರಿ ನಿರಾಕರಿಸಿದ್ದಾರೆ.

ಗುರುವಾರ ಮಧ್ಯಾಹ್ನ ಕೆಲವರು ನಮ್ಮ ಜಿಲ್ಲೆಗೆ ಪ್ರವೇಶಿಸಿದ್ದಾರೆ. ಮ್ಯಾನ್ಮಾರ್​ನಿಂದ ಬಂದ ಪ್ರಜೆಗಳಿಗೆ ಜಿಲ್ಲಾಡಳಿತಗಳು ಆಹಾರ ಮತ್ತು ಆಶ್ರಯ ನೀಡಿದೆ ಎಂದು ಚಂಪೈ ಜಿಲ್ಲಾಧಿಕಾರಿ ಮಾರಿಯಾ ಸಿ.ಟಿ. ಜುವಾಲಿ ತಿಳಿಸಿದ್ದಾರೆ.

ಫೆಬ್ರವರಿ 1 ರಂದು ಅಧ್ಯಕ್ಷ ಯು.ವಿನ್ ಮೈಂಟ್ ಮತ್ತು ರಾಜ್ಯ ಕೌನ್ಸಿಲರ್ ಆಂಗ್ ಸಾನ್ ಸೂಕಿ ಅವರನ್ನು ಮಿಲಿಟರಿ ಆಡಳಿತ ಬಂಧಿಸಿದ ನಂತರ ರಾಜ್ಯ ಅಧಿಕಾರವನ್ನು ಸೆನ್-ಜನರಲ್ ಮಿನ್ ಆಂಗ್ ಹ್ಲೇಂಗ್‌ಗೆ ವರ್ಗಾಯಿಸಲಾಯಿತು. ಅವರು ಅಧಿಕಾರಕ್ಕೆ ಬಂದ ನಂತರ ಮ್ಯಾನ್ಮಾರ್‌ನಲ್ಲಿ ಒಂದು ವರ್ಷದ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.

ABOUT THE AUTHOR

...view details