ಇಸ್ಲಾಮಾಬಾದ್(ಪಾಕಿಸ್ತಾನ):'ಪ್ಯಾಲೆಸ್ತೀನಿಯರು ತಮ್ಮ ಹಕ್ಕುಗಳನ್ನು ಪಡೆಯುವವರೆಗೆ ಅವರು ಇಸ್ರೇಲ್ ರಾಷ್ಟ್ರದವರೆಂದು ಪರಿಗಣಿಸುವುದಿಲ್ಲ' ಎಂದು ಪಾಕಿಸ್ತಾನ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರು ಆ ಸಮುದಾಯದ ಬಗ್ಗೆ ಸ್ಪಷ್ಟವಾದ ನಿಲುವು ತೆಗೆದುಕೊಂಡಿದ್ದರು ಎಂದು ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಮಂಗಳವಾರ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಇಮ್ರಾನ್ ಖಾನ್ ಪಾಕ್ನ ವಿದೇಶಾಂಗ ನೀತಗಳ ಬಗ್ಗೆ ಮಾತನಾಡಿ, ಚೀನಾ ಸಂಬಂಧ, ಇಸ್ರೇಲ್, ಕಾಶ್ಮೀರ ಸಮಸ್ಯೆ, ಅಫ್ಗಾನ್ ಶಾಂತಿ ಪ್ರಕ್ರಿಯೆ, ಆರ್ಥಿಕತೆ, ರಾಷ್ಟ್ರೀಯ ಸಮಸ್ಯೆಗಳು ಮತ್ತು ರಾಜಕೀಯ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಅವರು ಸುದೀರ್ಘವಾಗಿ ಚರ್ಚಿಸಿದ್ದಾರೆ ಎಂದು ನ್ಯೂಸ್ ಇಂಟರ್ನ್ಯಾಷನಲ್ ವರದಿ ಮಾಡಿದೆ.