ಕಾಬೂಲ್ (ಅಫ್ಘಾನಿಸ್ತಾನ):ತಾಲಿಬಾನ್ ಉಗ್ರರ ಅಟ್ಟಹಾಸ ಹೆಚ್ಚಾಗುತ್ತಿದ್ದಂತೆ ಭಯಭೀತರಾದ ಜನರು ಬೇರೆ ದೇಶಗಳಿಗೆ ಪಲಾಯನ ಮಾಡಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಮಕ್ಕಳನ್ನು ಕಾಪಾಡಲು ಹೆತ್ತವರು ಪಡುತ್ತಿರುವ ಸಂಕಷ್ಟ ಅಷ್ಟಿಷ್ಟಲ್ಲ ಎಂಬುದು ಕೆಲ ವಿಡಿಯೋಗಳಿಂದ ಸ್ಪಷ್ಟವಾಗಿದೆ.
ಒಬ್ಬ ತಾಯಿ ತನ್ನ ಕಂದಮ್ಮನನ್ನು ತಾಲಿಬಾನ್ ರಾಕ್ಷಸರ ಕೈಯಿಂದ ಕಾಪಾಡಲು ಅಮೆರಿಕಾದ ಸೈನಿಕರಿಗೆ ನೀಡುತ್ತಿರುವ ದೃಶ್ಯ ಎಂಥವರ ಮನಸ್ಸು ಕರಗುವಂತೆ ಮಾಡುತ್ತದೆ. ವಿಮಾನ ನಿಲ್ದಾಣದ ತಡೆಗೋಡೆಯ ಮೇಲೇರಿದ ಅಮೆರಿಕಾ ಸೇನಾ ಪಡೆಯ ಸೈನಿಕ ಮಗುವನ್ನು ತಾಯಿಯಿಂದ ಪಡೆದುಕೊಳ್ಳುವ ದೃಶ್ಯ ಮೊಬೈಲ್ ಕ್ಯಾಮರಾದದಲ್ಲಿ ಸೆರೆಯಾಗಿದೆ.