ನವದೆಹಲಿ :ನ್ಯಾಟೋ ಪಡೆಗಳನ್ನು ಹಿಂಪಡೆದ ಬಳಿಕ ಅಫ್ಘಾನಿಸ್ತಾನವನ್ನು ತಾಲಿಬಾನ್ ಸಂಪೂರ್ಣವಾಗಿ ವಶಪಡಿಸಿಕೊಂಡು ಇದೀಗ ಸರ್ಕಾರವನ್ನು ರಚಿಸಿ ಆಡಳಿತಕ್ಕೆ ಮುಂದಾಗಿದೆ. ಆದರೆ, ಅಫ್ಘಾನ್‌ನಿಂದ ಸ್ಥಳಾಂತರಿಸಲ್ಪಟ್ಟ ಲಕ್ಷಾಂತರ ಮಂದಿ ಜನರಲ್ಲಿ ಅಮೆರಿಕದ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿಯಿಂದ ತರಬೇತಿ ಪಡೆದಿದ್ದ ಅಫ್ಘಾನ್ ಕಮಾಂಡೋಗಳು ಸೇರಿದ್ದಾರೆ ಎಂಬ ಅಚ್ಚರಿಯ ಮಾಹಿತಿ ಈಟಿವಿ ಭಾರತಕ್ಕೆ ಲಭ್ಯವಾಗಿದೆ. ಅಮೆರಿಕಗೆ ಬೆಂಬಲ ನೀಡಿದ್ದಾರೆ ಎಂಬ ಕಾರಣಕ್ಕೆ ತಾಲಿಬಾನ್‌ಗಳು ವಿಶೇಷವಾಗಿ ಈ ಪಡೆಗಳನ್ನು ಬೇಟೆಯಾಡುತ್ತಿದ್ದರು.
ಹೀಗೆ ಸ್ಥಳಾಂತರವಾಗಿರುವವರ ಪೈಕಿ ಸುಮಾರು 20,000 ಸೈನಿಕರು ಅಮೆರಿಕ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ಸಿಐಎನಿಂದ ಬೆಳೆದ, ತರಬೇತಿ ಪಡೆದ ಸುಮಾರು ಶೇ.90ರಷ್ಟು ಅಫ್ಘಾನ್ ವಿಶೇಷ ಪಡೆಗಳ ಕಮಾಂಡೋಗಳನ್ನು ಕತಾರ್ ಮೂಲಕ ಯಶಸ್ವಿಯಾಗಿ ಸ್ಥಳಾಂತರಿಸಲಾಗಿದೆ. ಅವರಲ್ಲಿ ಹೆಚ್ಚಿನವರು ಯುಎಸ್ ತಲುಪಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಕಾಲೂಬ್‌ನಲ್ಲಿರುವ ಅಫ್ಘಾನ್ ಗುಪ್ತಚರ ಮೂಲಗಳು ತಿಳಿಸಿವೆ.