ಕರ್ನಾಟಕ

karnataka

ETV Bharat / international

ಜೋಗ್​ಬಾನಿ-ಬಿರತ್ನಗರ ಚೆಕ್‌ ಪೋಸ್ಟ್‌ ಉದ್ಘಾಟಿಸಿದ ಮೋದಿ- ನೇಪಾಳ ಪ್ರಧಾನಿ ಓಲಿ

ಭಾರತ ಹಾಗೂ ನೇಪಾಳದ ಗಡಿಭಾಗವಾದ ಜೋಗ್​ಬಾನಿ-ಬಿರತ್ನಗರ್​ನಲ್ಲಿ ಇಂಟಿಗ್ರೇಟೆಡ್ ಚೆಕ್‌ ಪೋಸ್ಟ್‌ (ICP) ಅನ್ನು ಪಿಎಂ ನರೇಂದ್ರ ಮೋದಿ ಹಾಗೂ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಉದ್ಘಾಟಿಸಿದ್ದು, ಎರಡು ದೇಶಗಳ ನಡುವಿನ ವ್ಯಾಪಾರ-ವಹಿವಾಟಿಗೆ ಈ ಯೋಜನೆ ಸಹಕಾರಿಯಾಗಲಿದೆ.

Modi, Oli jointly inaugurate check post at Jogbani-Biratnagar
ಮೋದಿ- ಓಲಿ

By

Published : Jan 21, 2020, 3:12 PM IST

ನೇಪಾಳ/ ನವದೆಹಲಿ: ಭಾರತ, ನೇಪಾಳ ಜಂಟಿಯಾಗಿ ಕೆಲ ಯೋಜನೆಗಳನ್ನು ಜಾರಿ ತರಲು ಮುಂದಾಗಿದ್ದು, ಇದರ ಭಾಗವಾಗಿ ಇಂದು ಎರಡು ದೇಶಗಳ ಗಡಿಭಾಗವಾದ ಜೋಗ್​ಬಾನಿ-ಬಿರತ್ನಗರ್​ನಲ್ಲಿ ಇಂಟಿಗ್ರೇಟೆಡ್ ಚೆಕ್‌ ಪೋಸ್ಟ್‌ (ICP) ಅನ್ನು ಪಿಎಂ ನರೇಂದ್ರ ಮೋದಿ ಹಾಗೂ ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಉದ್ಘಾಟಿಸಿದ್ದಾರೆ.

ಜೋಗ್​ಬಾನಿ-ಬಿರತ್ನಗರ ಚೆಕ್‌ ಪೋಸ್ಟ್‌ ಉದ್ಘಾಟಿಸಿದ ಮೋದಿ- ಓಲಿ

ಭಾರತದ ನೆರವಿನಿಂದಾಗಿ 260 ಎಕರೆ ಜಾಗದಲ್ಲಿ, 140 ಕೋಟಿ ವೆಚ್ಚದಲ್ಲಿ ಇಂಟಿಗ್ರೇಟೆಡ್ ಚೆಕ್‌ ಪೋಸ್ಟ್‌ ಅನ್ನು ಕಟ್ಟಲಾಗಿದ್ದು, ಇದು ಪ್ರತಿನಿತ್ಯ 500 ಟ್ರಕ್​ಗಳ ಸಂಚಾರ ಸಾಮರ್ಥ್ಯ ಹೊಂದಿದೆ. ಎರಡು ದೇಶಗಳ ನಡುವಿನ ವ್ಯಾಪಾರ ಹಾಗೂ ಜನರ ಸಂಪರ್ಕವನ್ನು ಹೆಚ್ಚಿಸಲಿರುವ ಈ ಯೋಜನೆಯನ್ನು ಎರಡೂ ರಾಷ್ಟ್ರಗಳ ಪ್ರಧಾನಿಗಳು ವಿಡಿಯೋ ಲಿಂಕ್​ ಮೂಲಕ ಚಾಲನೆ ನೀಡಿದ್ದಾರೆ.

ಉದ್ಘಾಟನೆ ಬಳಿಕ ಮಾತನಾಡಿರುವ ಪಿಎಂ ಮೋದಿ, ಭಾರತ ಮತ್ತು ನೇಪಾಳ ರಸ್ತೆ, ರೈಲು, ಪ್ರಸರಣ ಮಾರ್ಗಗಳಂತಹ ಹಲವಾರು ಗಡಿಯಾಚೆಗಿನ ಸಂಪರ್ಕ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಚೆಕ್​ ಪೋಸ್ಟ್​ ಎರಡು ದೇಶಗಳ ನಡುವಿನ ವ್ಯಾಪಾರ-ವಹಿವಾಟಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಉಭಯ ದೇಶಗಳ ಮಾತುಕತೆಯಿಂದ ಬಾಕಿ ವಿಷಯಗಳನ್ನು ಬಗೆಹರಿಸುವ ಸಮಯ ಬಂದಿದ್ದು, ಇನ್ನುಮುಂದೆ ನಮ್ಮ ಸರ್ಕಾರ ಭಾರತದೊಂದಿಗೆ ಸೇರಿ ಕೆಲಸ ಮಾಡಲಿದೆ ಎಂದು ನೇಪಾಳ ಪ್ರಧಾನಿ ಓಲಿ ತಿಳಿಸಿದರು.

ಭಾರತ ಮತ್ತು ನೇಪಾಳ ಸೇರಿ ನಿರ್ಮಿಸಿರುವ ಎರಡನೇ ICP ಇದಾಗಿದ್ದು, ಈ ಹಿಂದೆ 2018 ರಲ್ಲಿ ರಕ್ಸೌಲ್-ಬಿರ್ಗುಂಜ್​ನಲ್ಲಿ ಮೊದಲ ICP ಕಟ್ಟಲಾಗಿತ್ತು.

ABOUT THE AUTHOR

...view details