ಕರ್ನಾಟಕ

karnataka

ETV Bharat / international

ಪಾಕಿಸ್ತಾನದ ಮೊದಲ ಹಿಂದೂ ಪೈಲಟ್​​ ಆದ ರಾಹುಲ್ ದೇವ್! - ಪಾಕಿಸ್ತಾನದ ಮೊದಲ ಹಿಂದೂ ಪೈಲಟ್ ರಾಹುಲ್ ದೇವ್

ರಾಹುಲ್ ದೇವ್ ಪಾಕ್​ ವಾಯುಸೇನೆಯಲ್ಲಿ ಪೈಲಟ್ ಆದ ಮೊದಲ ಹಿಂದೂ ಯುವಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪಾಕಿಸ್ತಾನದ ಮೊದಲ ಹಿಂದೂ ಪೈಲಟ್ ರಾಹುಲ್ ದೇವ್...
ಪಾಕಿಸ್ತಾನದ ಮೊದಲ ಹಿಂದೂ ಪೈಲಟ್ ರಾಹುಲ್ ದೇವ್...

By

Published : May 5, 2020, 11:03 PM IST

ಲಾಹೋರ್: ಮೊದಲ ಬಾರಿಗೆ ಪಾಕ್​ ವಾಯುಸೇನೆಯಲ್ಲಿ ಹಿಂದೂ ಯುವಕನೋರ್ವನನ್ನು ಪೈಲಟ್ ಆಗಿ ಆಯ್ಕೆ ಮಾಡಲಾಗಿದೆ. ರಾಹುಲ್ ದೇವ್ ಎಂಬ ಯುವಕನನ್ನು ಪಾಕಿಸ್ತಾನ ವಾಯುಸೇನೆಯಲ್ಲಿ (ಪಿಎಎಫ್) ಜನರಲ್ ಡ್ಯೂಟಿ (ಜಿಡಿ) ಪೈಲಟ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದು ಡೈಲಿ ಪಾಕಿಸ್ತಾನ ವರದಿ ಮಾಡಿದೆ.

ರಾಹುಲ್​ ದೇವ್, ಸಿಂಧ್ ಪ್ರಾಂತ್ಯದ ಅತಿದೊಡ್ಡ ಜಿಲ್ಲೆಯಾದ ಥಾರ್‌ ಪಾರ್ಕರ್ ಮೂಲದವರಾಗಿದ್ದು, ಇದು ಹಿಂದೂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಪಾಕಿಸ್ತಾನದ ಅಲ್ಪಸಂಖ್ಯಾತರ ವಿರುದ್ಧ ಧಾರ್ಮಿಕ ತಾರತಮ್ಯದ ವರದಿಗಳ ಮಧ್ಯೆ ಈ ಬೆಳವಣಿಗೆ ನಡೆದಿರುವುದು ಅಚ್ಚರಿ ಮೂಡಿಸಿದೆ. ಅಪ್ರಾಪ್ತ ವಯಸ್ಕರು ಮತ್ತು ಮಹಿಳೆಯರ ಬಲವಂತದ ಮತಾಂತರ ಮತ್ತು ವಿವಾಹಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಪೂಜಾ ಸ್ಥಳಗಳನ್ನು ಧ್ವಂಸಗೊಳಿಸಿದ ಹಲವಾರು ಘಟನೆಗಳು ದೇಶದಲ್ಲಿ ಬೆಳಕಿಗೆ ಬಂದಿವೆ.

ಇದಕ್ಕೂ ಮೊದಲು 2018ರಲ್ಲಿ ಪಾಕಿಸ್ತಾನದ ಚುನಾವಣಾ ಇತಿಹಾಸದಲ್ಲಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ (ಪಿಪಿಪಿ) ಮಹೇಶ್ ಕುಮಾರ್ ಮಲಾನಿ ರಾಷ್ಟ್ರೀಯ ಅಸೆಂಬ್ಲಿ (ಎನ್‌ಎ) ಸ್ಥಾನವನ್ನು ಗೆದ್ದ ಮೊದಲ ಹಿಂದೂ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ABOUT THE AUTHOR

...view details