ಜಕಾರ್ತ(ಇಂಡೋನೇಷ್ಯಾ):ಸಿಡಿಲು ಬಡಿದರೆ ಮನುಷ್ಯರು ಬದುಕುವುದೇ ಕಷ್ಟ. ಆದ್ರೆ ಇಲ್ಲೊಬ್ಬ ವ್ಯಕ್ತಿ ಯಮನಿಗೆ ಸವಾಲು ಹಾಕಿ ಸಾವನ್ನೇ ಗೆದ್ದು ಬಂದಿದ್ದಾನೆ. ಸಿಡಿಲು ಬಡಿದ್ರೂ ಸಹ ಬಚಾವ್ ಆಗಿ ಬಂದಿರುವ ಘಟನೆ ಬೆಳಕಿಗೆ ಬಂದಿದೆ.
Indonesia lightning strike:35 ವರ್ಷದ ವ್ಯಕ್ತಿಯೊಬ್ಬರು ಜಕಾರ್ತದ ಕಂಪನಿಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ಕರ್ತವ್ಯದಲ್ಲಿದ್ದಾಗ ಸಿಡಿಲು ಬಡಿದಿದೆ. ಈ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.
ಓದಿ:ಮದನಿ ವಿರುದ್ಧ ಸಾಕ್ಷಿ ಹೇಳದಂತೆ ಬೆದರಿಕೆ ಆರೋಪ : ಪ್ರಕರಣ ರದ್ದುಪಡಿಸಲು ನಿರಾಕರಿಸಿದ ಹೈಕೋರ್ಟ್
ಸೆಕ್ಯೂರಿಟಿ ಗಾರ್ಡ್ ಮಳೆಗಾಲದಲ್ಲಿ ಕೊಡೆ ಹಿಡಿದುಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಕೆಲವು ಸೆಕೆಂಡುಗಳ ನಂತರ ಸಿಡಿಲು ಆ ವ್ಯಕ್ತಿಗೆ ಅಪ್ಪಳಿಸಿದೆ. ಆ ಕ್ಷಣದಲ್ಲಿ ಭಾರಿ ಮಿಂಚು ಕಾಣಿಸಿಕೊಂಡಿದೆ. ಇದರಿಂದ ಆತ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ನಂತರ ಸಹೋದ್ಯೋಗಿಗಳು ಓಡಿ ಬಂದು ಆತನನ್ನು ಆಸ್ಪತ್ರೆಗೆ ದಾಖಲಿಸಿದರು.
ಅದೃಷ್ಟವಶಾತ್ ಸಿಡಿಲು ಬಡಿದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು 'ಡೆಟಿಕ್ ನ್ಯೂಸ್' ವರದಿ ಮಾಡಿದೆ. ಸಿಡಿಲಿನಿಂದಾಗಿ ಆತನ ಕೈಗಳಿಗೆ ತೀವ್ರ ಪೆಟ್ಟಾಗಿದೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಅವರು ಸದ್ಯ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಕೈಯಲ್ಲಿದ್ದ ವಾಕಿಟಾಕಿಯಿಂದ ಸಿಡಿಲು ಅಪ್ಪಳಿಸಿದೆ ಎಂದು ಕೆಲವರ ಮಾತಾಗಿದೆ. ಕೆಲವರು ಕೈಯಲ್ಲಿ ಕೊಡೆ ಇದ್ದ ಕಾರಣ ಸಿಡಿಲು ಬಡಿದಿದೆ ಎಂದು ಹೇಳುತ್ತಾರೆ.
ಕಳೆದ ವಾರ ಈ ಘಟನೆ ನಡೆದಿದೆಯಂತೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.