ಕರ್ನಾಟಕ

karnataka

ETV Bharat / international

ಚೀನಾದಲ್ಲಿ ಗಾಳಿಗೆ ಹಾರಿಹೋದ ಗ್ಲಾಸ್​ ಸ್ಲೈಡ್​.. 330 ಅಡಿ ಎತ್ತರದ ಸೇತುವೆಯಲ್ಲಿ ನೇತಾಡಿದ ವ್ಯಕ್ತಿ.. - Man Dangling From 330 Foot Glass Bridge in China news

ಲಾಂಗ್‌ಜಿಂಗ್ ಸಿಟಿಯ ವೀಬೊ ಪುಟದ ಪ್ರಕಾರ, ಘಟನೆ ಜರುಗಿದ ಬಳಿಕ ಈ ಪ್ರದೇಶವನ್ನು ಮುಚ್ಚಲಾಗಿದೆ. ಘಟನೆಯ ಬಗ್ಗೆ ತನಿಖೆ ಆರಂಭಿಸಲಾಗಿದೆ. ಇದು ಚೀನಾದಲ್ಲಿ ಈ ರೀತಿಯ ಮೊದಲ ಅಪಘಾತವಲ್ಲ. 2018ರಲ್ಲಿ ಹೆಬೈ ಪ್ರಾಂತ್ಯವು ಸೇತುವೆಗಳು ನಡಿಗೆ ಮಾರ್ಗಗಳು ಮತ್ತು ವೀಕ್ಷಣಾ ಡೆಕ್‌ಗಳನ್ನು ಒಳಗೊಂಡಂತೆ ತನ್ನ 32 ಗಾಜಿನ ಪ್ಯಾನೆಲ್​ಗಳನ್ನು ಮುಚ್ಚಿದೆ..

Man Dangling From 330 Foot Glass Bridge in China
ಚೀನಾದಲ್ಲಿ ಗಾಳಿಗೆ ಹಾರಿಹೋದ ಗ್ಲಾಸ್​ ಸ್ಲೈಡ್

By

Published : May 11, 2021, 11:58 AM IST

ರಭಸವಾದ ಗಾಳಿಯಿಂದಾಗಿ ಗಾಜಿನ ಫಲಕಗಳು ಹಾನಿಗೊಳಗಾದ ನಂತರ ಚೀನಾದಲ್ಲಿ ವ್ಯಕ್ತಿಯೋರ್ವ ಸೇತುವೆಯಲ್ಲಿ ತೂಗಾಡುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.

ಈ ವ್ಯಕ್ತಿಯು ಶುಕ್ರವಾರ ಪಿಯಾನ್ ಪರ್ವತದಲ್ಲಿರುವ 100 ಮೀಟರ್ ಎತ್ತರದ ಸೇತುವೆಗೆ (330 ಅಡಿ) ಭೇಟಿ ನೀಡಿದಾಗ ಈ ಘಟನೆ ಜರುಗಿದೆ. ಅತ್ಯಂತ ಜೋರಾಗಿ ಬೀಸುತ್ತಿದ್ದ ಗಾಳಿಗೆ ಸೇತುವೆಯ ಮೇಲಿದ್ದ ಗಾಜಿನ ಫಲಕಗಳು 150 ಕಿ.ಮೀ/ಗಂ ದೂರಕ್ಕೆ ಸಾಗಿ ಬಿದ್ದಿವೆ.

ಚೀನಾದಲ್ಲಿ ಸುಮಾರು 2,300 ಗಾಜಿನ ಸೇತುವೆಗಳು ಮತ್ತು ಹಲವಾರು ಗಾಜಿನ ಕಾಲುದಾರಿಗಳು ಮತ್ತು ಸ್ಲೈಡ್‌ಗಳಿವೆ ಎಂದು ಭಾವಿಸಲಾಗಿದೆ. ಪ್ರವಾಸಿಗರನ್ನು ಆಕರ್ಷಿಸಲು ಮತ್ತು ಚೀನಾದ ಬೆಳೆಯುತ್ತಿರುವ ದೇಶೀಯ ಪ್ರವಾಸೋದ್ಯಮದ ಲಾಭಕ್ಕಾಗಿ ಅವುಗಳನ್ನು ವಿನ್ಯಾಸಗೊಳಿಸಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ಈ ಚಿತ್ರವು ವ್ಯಕ್ತಿಯೋರ್ವ ಸೇತುವೆಯ ಮಧ್ಯದಲ್ಲಿ ತೂಗಾಡುತ್ತಿರುವ ಸನ್ನಿವೇಶವನ್ನು ಬಿಂಬಿಸುತ್ತದೆ. ಈ ಸೇತುವೆಯು ಲಾಂಗ್‌ಜಿಂಗ್ ನಗರದ ಸಮೀಪ ಒಂದು ಸುಂದರವಾದ ಪ್ರದೇಶದಲ್ಲಿದೆ.

ಇದನ್ನೂ ಓದಿ: ಭಾರತದ ಕೋವಿಡ್ ಹೋರಾಟಕ್ಕೆ 15 ಮಿಲಿಯನ್ ಡಾಲರ್ ನೆರವು ನೀಡಿದ ಟ್ವಿಟ್ಟರ್​

ವಿಷಯ ತಿಳಿದು ವ್ಯಕ್ತಿಯನ್ನು ರಕ್ಷಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿದರು. ಆನ್-ಸೈಟ್ ಸಿಬ್ಬಂದಿಯ ಸಹಾಯದಿಂದ ವ್ಯಕ್ತಿಯನ್ನು ಯಶಸ್ವಿಯಾಗಿ ರಕ್ಷಿಸಲಾಯಿತು ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಬಳಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವ್ಯಕ್ತಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.

ಲಾಂಗ್‌ಜಿಂಗ್ ಸಿಟಿಯ ವೀಬೊ ಪುಟದ ಪ್ರಕಾರ, ಘಟನೆ ಜರುಗಿದ ಬಳಿಕ ಈ ಪ್ರದೇಶವನ್ನು ಮುಚ್ಚಲಾಗಿದೆ. ಘಟನೆಯ ಬಗ್ಗೆ ತನಿಖೆ ಆರಂಭಿಸಲಾಗಿದೆ. ಇದು ಚೀನಾದಲ್ಲಿ ಈ ರೀತಿಯ ಮೊದಲ ಅಪಘಾತವಲ್ಲ. 2018ರಲ್ಲಿ ಹೆಬೈ ಪ್ರಾಂತ್ಯವು ಸೇತುವೆಗಳು ನಡಿಗೆ ಮಾರ್ಗಗಳು ಮತ್ತು ವೀಕ್ಷಣಾ ಡೆಕ್‌ಗಳನ್ನು ಒಳಗೊಂಡಂತೆ ತನ್ನ 32 ಗಾಜಿನ ಪ್ಯಾನೆಲ್​ಗಳನ್ನು ಮುಚ್ಚಿದೆ.

ಈ ಪ್ರದೇಶಗಳಲ್ಲಿ ಸುರಕ್ಷತಾ ತಪಾಸಣೆ ನಡೆಸಲಾಗುತ್ತಿದೆ. ಗುವಾಂಗ್ಕ್ಸಿ ಪ್ರಾಂತ್ಯದಲ್ಲಿ ಗಾಜಿನ ಸ್ಲೈಡ್‌ನಿಂದ ಬಿದ್ದು 2019ರಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದರು. 2016ರಲ್ಲಿ ಜಾಂಗ್‌ಜಿಯಾಜಿ ನಗರದಲ್ಲಿ ಗಾಜಿನ ನಡಿಗೆ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಪ್ರವಾಸಿಗರು ಗಾಯಗೊಂಡಿದ್ದರು.

For All Latest Updates

TAGGED:

ABOUT THE AUTHOR

...view details