ಕರ್ನಾಟಕ

karnataka

ETV Bharat / international

ಮಯನ್ಮಾರ್ ಪ್ರಜೆಗಳ ಗಡಿಪಾರಿಗೆ ಮಲೇಷಿಯಾ ಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ - ಅಸಿಲಮ್ ಅಕ್ಸೆಸ್

1200 ಮಂದಿಯಲ್ಲಿರುವ ಮಕ್ಕಳನ್ನು ರಕ್ಷಣೆ ಮಾಡುವುದು ಮಲೇಷಿಯಾ ಸರ್ಕಾರದ ಜವಾಬ್ದಾರಿಯಾಗಿದೆ. ಮಲೇಷಿಯಾದ ಕಾನೂನಿನಲ್ಲಿರುವ ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಇದನ್ನು ಉಲ್ಲೇಖಿಸಲಾಗಿದೆ ಎಂದು ಅಸಿಲಮ್ ಅಕ್ಸೆಸ್​ನ ಕಾರ್ಯಕಾರಿ ನಿರ್ದೇಶಕ ಥಾಮ್ ಹುವೈ ಯಿಂಗ್ ಅಭಿಪ್ರಾಯಪಟ್ಟಿದ್ದಾರೆ..

Malaysian court allows temporary stay of deportation of 1,200 Myanmar nationals
ಮಯನ್ಮಾರ್ ಪ್ರಜೆಗಳ ಗಡಿಪಾರಿಗೆ ಮಲೇಷಿಯಾ ಕೋರ್ಟ್ ತಡೆಯಾಜ್ಞೆ

By

Published : Feb 23, 2021, 7:44 PM IST

ಕೌಲಲಾಂಪುರ್ :ಗಡಿ ಪಾರಿಗೆ ಆದೇಶಿಸಲಾಗಿದ್ದ ಸುಮಾರು 1,200 ಮಂದಿ ಮಯನ್ಮಾರ್ ಪ್ರಜೆಗಳಿಗೆ ಮಲೇಷಿಯಾ ಕೋರ್ಟ್ ಮಂಗಳವಾರ ತಾತ್ಕಾಲಿಕ ರಿಲೀಫ್ ನೀಡಿದೆ.

ಆಲ್ ಜಜೀರಾ ವರದಿ ಹೇಳುವಂತೆ ಈ ಮಯನ್ಮಾರ್​ನಲ್ಲಿ ಮಿಲಿಟರಿ ದಂಗೆ ನಡೆಯುತ್ತಿರುವ ಕಾರಣದಿಂದ ಈಗ ಗಡಿಪಾರಾಗಲಿರುವ ಜನರ ಜೀವಕ್ಕೆ ಕುತ್ತುಂಟಾಗುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ಮಲೇಷಿಯಾ ಕೋರ್ಟ್ ಈ ಆದೇಶ ನೀಡಿದೆ.

ಮಾನವ ಹಕ್ಕುಗಳ ಸಂಸ್ಥೆಗಳಾದ ಅಮ್ನೆಸ್ಟಿ ಇಂಟರ್​ ನ್ಯಾಷನಲ್ ಮತ್ತು ಅಸಿಲಮ್ ಅಕ್ಸೆಸ್ ಸಂಸ್ಥೆಗಳು ಮಲೇಷಿಯಾ ಸರ್ಕಾರಕ್ಕೆ ಪತ್ರ ಬರೆದು, ಮಯನ್ಮಾರ್​ನಲ್ಲಿ ಸೇನಾ ದಂಗೆಯ ವೇಳೆ ಇವರನ್ನು ಆ ದೇಶಕ್ಕೆ ಬಿಡುವುದು ಸರಿಯಲ್ಲ ಎಂದು ಹೇಳಿದ್ದವು.

ಇದನ್ನೂ ಓದಿ:ಕುಡಿದ ನಶೆಯಲ್ಲಿ ಏಳು ತಿಂಗಳ ಮಗುವಿನ ಕೊಲೆ ಮಾಡಿದ ಪಾಪಿ ತಂದೆ!

ಈ ಸಂಸ್ಥೆಗಳ ಮನವಿಗೆ ಸ್ಪಂದಿಸಿದ ಮಲೇಷಿಯಾ ಕೋರ್ಟ್, ಅಲ್ಲಿನ ಸರ್ಕಾರದ ನಿರ್ಧಾರಕ್ಕೆ ತಡೆಯಾಜ್ಞೆ ತಂದಿದೆ. ನಾಳೆಗೆ ವಿಚಾರಣೆ ಮತ್ತೆ ಕೈಗೆತ್ತಿಕೊಳ್ಳಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಮ್ನೆಸ್ಟಿ ಇಂಟರ್​ ನ್ಯಾಷನಲ್ ಮಲೇಷಿಯಾದ ಕಾರ್ಯಕಾರಿ ನಿರ್ದೇಶಕ ಕಟ್ರಿನಾ ಜೊರೆನ್ ಮಿಲಿಯಾಮೌ, ಕೋರ್ಟ್​ ಆದೇಶವನ್ನು ಸರ್ಕಾರ ಪಾಲಿಸಬೇಕು. 1200 ಮಂದಿಯಲ್ಲಿ ಒಬ್ಬನೇ ಒಬ್ಬನನ್ನು ಗಡಿಪಾರು ಮಾಡಬಾರದು ಎಂದಿದ್ದಾರೆ.

1200 ಮಂದಿಯಲ್ಲಿರುವ ಮಕ್ಕಳನ್ನು ರಕ್ಷಣೆ ಮಾಡುವುದು ಮಲೇಷಿಯಾ ಸರ್ಕಾರದ ಜವಾಬ್ದಾರಿಯಾಗಿದೆ. ಮಲೇಷಿಯಾದ ಕಾನೂನಿನಲ್ಲಿರುವ ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಇದನ್ನು ಉಲ್ಲೇಖಿಸಲಾಗಿದೆ ಎಂದು ಅಸಿಲಮ್ ಅಕ್ಸೆಸ್​ನ ಕಾರ್ಯಕಾರಿ ನಿರ್ದೇಶಕ ಥಾಮ್ ಹುವೈ ಯಿಂಗ್ ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details