ಕರ್ನಾಟಕ

karnataka

ETV Bharat / international

ಉಕ್ರೇನ್​​: ತಂದೆಗೆ ವಿದಾಯ ಹೇಳಿ ಕಣ್ಣೀರು ಹಾಕಿದ ಪುಟ್ಟ ಹುಡುಗಿ.. ಈ ಫೋಟೋ ನೋಡಿದರೆ ಮನ ಕಲಕದಿರದು!! - Ukraine Russia war

ಉಕ್ರೇನ್‌ನಲ್ಲಿ ಹೋರಾಡುತ್ತಿರುವ ತನ್ನ ತಂದೆಗೆ ವಿದಾಯ ಹೇಳಿದ ನಂತರ ಪೋಲೆಂಡ್‌ನ ಗಡಿಯಲ್ಲಿ ಪುಟ್ಟ ಹುಡುಗಿಯೊಬ್ಬಳು ಕಣ್ಣೀರು ಹಾಕುತ್ತಿರುವ ಚಿತ್ರವು ವೈರಲ್​ ಆಗಿದೆ.

Little girl's heartbreak as she leaves her dad behind after fleeing Ukraine
ತಂದೆಗೆ ವಿದಾಯ ಹೇಳಿ ಕಣ್ಣೀರು ಹಾಕಿದ ಪುಟ್ಟ ಹುಡುಗಿ

By

Published : Mar 2, 2022, 8:52 AM IST

ಕೀವ್​( ಉಕ್ರೇನ್​): ಉಕ್ರೇನ್​​ ವಿರುದ್ಧ ರಷ್ಯಾ ಯುದ್ಧ ಮುಂದುವರಿದಿದೆ. ಅದೆಷ್ಟೋ ಅಮೂಲ್ಯ ಜೀವಗಳು ಬಲಿಯಾಗಿವೆ, ಗಾಯಗೊಂಡಿವೆ. ಮತ್ತೊಂದಿಷ್ಟು ಜೀವಗಳು ಸಾವು ಬದುಕಿನ ನಡುವೆ ಹೋರಾಡುತ್ತಿದೆ. ಉಕ್ರೇನ್​ ಪರಿಸ್ಥಿತಿಯ ಕೆಲ ದೃಶ್ಯಗಳು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ರಷ್ಯಾದ ಕಠೋರ ಮನೋಭಾವನೆಯನ್ನು ಅವು ಸಾರುತ್ತಿವೆ.

ಉಕ್ರೇನ್‌ನಲ್ಲಿ ಹೋರಾಡುತ್ತಿರುವ ತನ್ನ ತಂದೆಗೆ ವಿದಾಯ ಹೇಳಿದ ನಂತರ ಪೋಲೆಂಡ್‌ನ ಗಡಿಯಲ್ಲಿ ಪುಟ್ಟ ಹುಡುಗಿಯೊಬ್ಬಳು ಕಣ್ಣೀರು ಹಾಕುತ್ತಿರುವ ಚಿತ್ರವು ರಷ್ಯಾದ ಆಕ್ರಮಣದಿಂದ ಉಂಟಾದ ಕ್ರಾಂತಿಯನ್ನು ತಿಳಿಸುತ್ತಿರುವಂತಿದೆ.

ಇದನ್ನೂ ಓದಿ:ಉಕ್ರೇನ್​ ಅಧ್ಯಕ್ಷರ ಹತ್ಯೆಗೆ ರಷ್ಯಾದಿಂದ ನುರಿತ ಪಡೆಗಳ ರವಾನೆ!

ಫೋಟೋದಲ್ಲಿ ಪುಟ್ಟ ಹುಡುಗಿ ಒಂದು ಚಿಕ್ಕ ಬ್ಯಾಗ್​ ಹಿಡಿದು, ಒಂದೆಡೆ ನಿಂತು ಕಣ್ಣೀರು ಹಾಕುತ್ತಿರುವುದನ್ನು ಕಾಣಬಹುದು. ಪೋಲೆಂಡ್‌ನ ಗಡಿಯಲ್ಲಿ ಲಕ್ಷಾಂತರ ಮಹಿಳೆಯರು ಮತ್ತು ಮಕ್ಕಳು ಬಂದು ಸೇರುತ್ತಿದ್ದಾರೆ. ಪತಿ ಮತ್ತು ತಂದೆಗೆ ವಿದಾಯ ಹೇಳಬೇಕಾದ ನಂತರ ಅವರ ಪರಿಸ್ಥಿತಿ ಏನೆಂಬುದು ಖಚಿತವಾಗಿಲ್ಲ.


ABOUT THE AUTHOR

...view details