ಕರಾಚಿ:ಪಾಕಿಸ್ತಾನದ ಟಾಪ್ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಲಾಹೋರ್ ವಿವಿಯಲ್ಲಿ ವಿದ್ಯಾರ್ಥಿನಿಯೋರ್ವಳು ತನ್ನ ಪ್ರಿಯಕರನಿಗೆ ಲವ್ ಪ್ರಪೋಸ್ ಮಾಡಿದ್ದು, ಇದರ ವಿಡಿಯೋ ಇದೀಗ ವೈರಲ್ ಆಗಿದೆ.
ವಿಶ್ವವಿದ್ಯಾಲಯದ ಎದುರೇ ಪ್ರಿಯಕರನಿಗೆ ಲವ್ ಪ್ರಪೋಸ್ ಮಾಡಿದ ವಿದ್ಯಾರ್ಥಿನಿ... ಮುಂದೇನಾಯ್ತು!? - ಲಾಹೋರ್ ವಿಶ್ವವಿದ್ಯಾಲಯ ಲವರ್ಸ್
ಲಾಹೋರ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೋರ್ವಳು ತನ್ನ ಸಹಪಾಠಿಗೆ ಲವ್ ಪ್ರಪೋಸ್ ಮಾಡಿದ್ದು, ಇದರ ವಿಡಿಯೋ ಎಲ್ಲೆಡೆ ವೈರಲ್ ಅಗಿದೆ.
![ವಿಶ್ವವಿದ್ಯಾಲಯದ ಎದುರೇ ಪ್ರಿಯಕರನಿಗೆ ಲವ್ ಪ್ರಪೋಸ್ ಮಾಡಿದ ವಿದ್ಯಾರ್ಥಿನಿ... ಮುಂದೇನಾಯ್ತು!? Lahore university students](https://etvbharatimages.akamaized.net/etvbharat/prod-images/768-512-10997618-thumbnail-3x2-wdffdfdf.jpg)
ವಿಶ್ವವಿದ್ಯಾಲಯದ ಕ್ಯಾಂಪಸ್ ಮುಂದೆ ಯುವತಿಯೋರ್ವಳು ಹೂಗುಚ್ಛ ನೀಡಿ ಪ್ರಿಯಕರಿಗೆ ಐ ಲವ್ ಯೂ ಹೇಳಿದ್ದಾಳೆ. ಇದಕ್ಕೆ ನಾಚಿಕೆಯಿಂದಲೇ ಯುವಕ ಲವ್ ಯು ಟೂ ಎಂದಿದ್ದಾನೆ. ಇದಾದ ಬಳಿಕ ಆಕೆಯನ್ನ ತಬ್ಬಿಕೊಂಡು ಮುದ್ದು ಮಾಡಿದ್ದಾನೆ. ಸಹಪಾಠಿಗಳು ಇವರ ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.
ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಇಬ್ಬರನ್ನು ಕ್ಯಾಂಪಸ್ನಿಂದ ಹೊರಹಾಕಿದೆ. ಜೊತೆಗೆ ಯಾವುದೇ ಕಾರಣಕ್ಕೂ ವಿಶ್ವವಿದ್ಯಾಯಲಯದ ಆವರಣದೊಳಗೆ ಬರದಂತೆ ಆದೇಶ ಸಹ ಹೊರಡಿಸಿದೆ. ಜತೆಗೆ ಕಾಲೇಜಿನಲ್ಲಿ ಶಿಸ್ತು ಕಾಪಾಡದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.