ಇಸ್ಲಾಮಾಬಾದ್ (ಪಾಕಿಸ್ತಾನ): ಯುಎಸ್ ವಾಯು ಗುಣಮಟ್ಟ ಸೂಚ್ಯಂಕ (US Air Quality Index) ಬಿಡುಗಡೆ ಮಾಡಿದ ವಾಯು ಮಾಲಿನ್ಯದ ಅಂಕಿಅಂಶಗಳ ಪ್ರಕಾರ ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಪಾಕಿಸ್ತಾನದ ಲಾಹೋರ್ (Lahore) ಅಗ್ರಸ್ಥಾನದಲ್ಲಿದೆ.
ಪಾಕಿಸ್ತಾನ ಸಾಂಸ್ಕೃತಿಕ ರಾಜಧಾನಿ ಲಾಹೋರ್ನಲ್ಲಿ ಬುಧವಾರ ವಾಯು ಗುಣಮಟ್ಟ ಸೂಚ್ಯಂಕವು 600ಕ್ಕೂ ಹೆಚ್ಚು ಪ್ರಮಾಣದಲ್ಲಿ ದಾಖಲಾಗಿದೆ. ಲಾಹೋರ್ನ ಗುಲ್ಬರ್ಗ್‌ನಲ್ಲಿ AQI 681 ಇದ್ದರೆ, ರೈವಿಂಡ್‌ನಲ್ಲಿ 626, ಅನಾರ್ಕಲಿ ಮಾರುಕಟ್ಟೆಯಲ್ಲಿ 541 ಮತ್ತು ಮಾಡೆಲ್ ಟೌನ್‌ನಲ್ಲಿ 532 ಮಟ್ಟ ದಾಖಲಾಗಿದೆ ಎಂದು SAMAA TV ವರದಿ ಮಾಡಿದೆ.
ಇತ್ತ ಪಾಕ್ನ ಮತ್ತೊಂದು ನಗರವಾದ ಕರಾಚಿ ವಿಶ್ವದ ಅತ್ಯಂತ ಕಲುಷಿತ ನಗರಗಳ (most polluted cites in the world) ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಕೂಡ ಹೊಗೆ ಆವರಿಸಿರುವುದು ಅಧಿಕಾರಿಗಳ ಆತಂಕಕ್ಕೆ ಕಾರಣವಾಗಿದೆ. ಕಳೆದ ವರ್ಷ ಕೂಡ ಲಾಹೋರ್ 'ವಿಶ್ವದ ಅತ್ಯಂತ ಕಲುಷಿತ ನಗರ' ಎಂಬ ಹಣೆಪಟ್ಟಿ ಪಡೆದಿತ್ತು.