ಲಾಹೋರ್:ಚಳಿಗಾಲದ ರಜಾದಿನಗಳಲ್ಲಿ ಪೂರ್ಣ ನ್ಯಾಯಪೀಠದ ಅಲಭ್ಯತೆಯನ್ನು ಉಲ್ಲೇಖಿಸಿ, ಲಾಹೋರ್ ಹೈಕೋರ್ಟ್ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ದೇಶದ್ರೋಹ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯದ ತೀರ್ಪಿನ ವಿರುದ್ಧ ಸಲ್ಲಿಸಿದ್ದ ವಿವಿಧ ಸಿವಿಲ್ ಅರ್ಜಿಗಳನ್ನ ಹಿಂದಿರುಗಿಸಿದ್ದಾರೆ.
ದೇಶದ್ರೋಹದ ದೂರಿನಿಂದ ಹಿಡಿದು ವಿಶೇಷ ವಿಚಾರಣಾ ನ್ಯಾಯಾಲಯದ ಸ್ಥಾಪನೆ ಮತ್ತು ಅದರ ವಿಚಾರಣೆ ಸೇರಿದಂತೆ ಎಲ್ಲಾ ಕ್ರಮಗಳನ್ನು ಪ್ರಶ್ನಿಸಿ ಖವಾಜಾ ಅಹ್ಮದ್ ತಾರಿಕ್ ರಹೀಮ್ ಮತ್ತು ಅಜರ್ ಸಿದ್ದಿಕ್ ಅವರನ್ನೊಳಗೊಂಡ ಕಾನೂನು ಸಮಿತಿಯು ಶುಕ್ರವಾರ ಅರ್ಜಿಯನ್ನು ಸಲ್ಲಿಸಿತ್ತು. ಚಳಿಗಾಲದ ರಜಾದಿನಗಳಲ್ಲಿ ಪೂರ್ಣ ಬೆಂಚ್ ಲಭ್ಯವಿಲ್ಲದ ಕಾರಣ ಲಾಹೋರ್ ಹೈಕೋರ್ಟ್ ರಿಜಿಸ್ಟ್ರಾರ್ ಕಚೇರಿ ಅರ್ಜಿಯನ್ನು ಹಿಂದಿರುಗಿಸಿದೆ ಎಂದು ವಕೀಲ ಸಿದ್ದೀಕ್ ತಿಳಿಸಿದ್ದಾರೆ. ಅಲ್ಲದೆ ಜನವರಿ ಮೊದಲ ವಾರದಲ್ಲಿ ಮತ್ತೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.