ಲಾಹೋರ್(ಪಾಕಿಸ್ತಾನ) : ಭಾರತೀಯ ಚಿತ್ರರಂಗದಲ್ಲಿ ಪಾಕ್‌ನ ನಟ-ನಟಿಯರು, ಸಿಂಗರ್ಸ್‌ಗಳಿಗೆ ಬ್ಯಾನ್ ಮಾಡಲಾಗಿದೆ. ಈಗ ಪಾಕ್‌ನಲ್ಲೂ ಬಾಲಿವುಡ್ ಚಿತ್ರಗಳನ್ನ ಬ್ಯಾನ್ ಮಾಡ್ಬೇಕು ಎಂಬ ಕೂಗೆದ್ದಿದೆ. ಈ ಬಗ್ಗೆ ಲಾಹೋರ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೂ ಸಲ್ಲಿಕೆಯಾಗಿದೆ.
ಶೇಖ್ ಮೊಹ್ಮದ್ ಲತೀಫ್ ಎಂಬುವರು ಹೈಕೋರ್ಟ್‌ನಲ್ಲಿ ಈ ಅರ್ಜಿ ಸಲ್ಲಿಸಿದ್ದಾರೆ. ಪ್ರಧಾನಿಯಾಗಿದ್ದ ನವಾಜ್ ಷರೀಫ್, ಭಾರತೀಯ ಸಿನಿಮಾಗಳೂ ಸೇರಿ ಎಲ್ಲ ಅಂತಾರಾಷ್ಟ್ರೀಯ ಚಿತ್ರಗಳನ್ನೂ ಪಾಕ್‌ನಲ್ಲಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ್ದರು. ಜನವರಿ ೩೧, ೨೦೧೭ರಲ್ಲಿ ಪಿಎಂ ಷರೀಫ್ ಈ ಬಗ್ಗೆ ಹೊರಡಿಸಿದ್ದ ಆದೇಶ ಕಾನೂನುಬಾಹಿರ ಅಂತ ಲತೀಫ್ ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ.
ಪುಲ್ವಾಮಾ ದಾಳಿಯಲ್ಲಿ 44ಕ್ಕೂ ಹೆಚ್ಚು ಸಿಆರ್‌ಪಿಎಫ್ ಯೋಧರು ಹುತಾತ್ಮರಾದ ಬಳಿಕ ಭಾರತೀಯ ಚಿತ್ರರಂಗದ ಕಾರ್ಮಿಕರ ಅಸೋಸಿಯೇಷನ್, ಪಾಕ್ ನಟ-ನಟಿಯರು ಹಾಗೂ ಕಲಾವಿದರನ್ನ ಸಂಪೂರ್ಣ ಭಾರತೀಯ ಚಿತ್ರರಂಗದಿಂದಲೇ ಬ್ಯಾನ್ ಮಾಡಿತ್ತು. ಈಗ ಇದಕ್ಕೆ ಪ್ರತಿಯಾಗಿ ಲಾಹೋರ್ ಹೈಕೋರ್ಟ್‌ನಲ್ಲಿ ಭಾರತೀಯ ಚಿತ್ರರಂಗದ ಸಿನಿಮಾ ಪ್ರದರ್ಶನ, ವ್ಯಾಪಾರ ವಿನಿಮಯ ಮಾಡಿಕೊಳ್ಳೋದನ್ನ ನಿಷೇಧಿಸಬೇಕೆಂದು ಈ ಅರ್ಜಿ ಸಲ್ಲಿಕೆಯಾಗಿದೆ.