ಬೀಜಿಂಗ್: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 370 ರದ್ದು ಮಾಡುತ್ತಿದ್ದಂತೆ ನೆರೆಯ ರಾಷ್ಟ್ರ ಪಾಕ್ ಆಕ್ರೋಶಗೊಂಡು, ಇದೇ ವಿಷಯವನ್ನ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪ ಮಾಡಲು ಮುಂದಾಗಿದೆ. ಅದಕ್ಕೆ ತನ್ನ ಆಪ್ತ ರಾಷ್ಟ್ರ ಚೀನಾದ ಸಹಾಯ ಕೇಳಿತ್ತು.
ಆದರೆ, ಚೀನಾ ಪ್ರವಾಸದಲ್ಲಿರುವ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅಲ್ಲಿನ ವಿದೇಶಾಂಗ ಸಚಿವ ವಾಂಗ್ ಯಿ ಜತೆ ಇದೇ ವಿಚಾರವಾಗಿ ಮಾತನಾಡಿ, ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾಗಿ ತಿಳಿದು ಬಂದಿದೆ.
ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಮತ್ತು ರಾಜ್ಯವನ್ನು ವಿಭಜನೆ ಮಾಡುವ ನಿರ್ಧಾರ ಭಾರತದ ಆಂತರಿಕ ವಿಚಾರ. ಇದರಲ್ಲಿ ಬೇರೆ ದೇಶಗಳ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಚೀನಾಗೆ ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ, ನಮ್ಮ(ಭಾರತ) ಹಾಗೂ ಚೀನಾ ನಡುವೆ ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ಆತಂರಿಕ ಗೊಂದಲಗಳಿದ್ದು, ಅವುಗಳನ್ನ ನಾವು ವಿವಾದ ರೂಪ ಪಡೆದುಕೊಳ್ಳಲು ಬಿಡುವುದಿಲ್ಲ. ಹೆಚ್ಚು ಹೆಚ್ಚು ಮಾತುಕತೆ ಮೂಲಕ ಈ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳುವುದು ಒಳ್ಳೆಯದು ಅವರು ತಿಳಿಸಿದ್ದಾರೆ ಎನ್ನಲಾಗಿದೆ.
ಅಕ್ಟೋಬರ್ನಲ್ಲಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ- ಜಿನ್ಪಿಂಗ್ ಮಾತುಕತೆ ನಡೆಸಲಿದ್ದು, ಈ ಬಗ್ಗೆ ಪೂರ್ವ ಸಿದ್ಧತೆಗಾಗಿ ಜೈಶಂಕರ್ ಚೀನಾ ಪ್ರವಾಸ ಕೈಗೊಂಡಿದ್ದಾರೆ. ಇದೇ ವೇಳೆ ಮಾನಸ ಸರೋವರ ಯಾತ್ರೆ ವಿಚಾರವಾಗಿ ಕೂಡ ಉಭಯ ದೇಶದ ವಿದೇಶಾಂಗ ಮಂತ್ರಿಗಳ ನಡುವೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಸಭೆ ಸಭೆಯ ಮಾತನಾಡಿರುವ ಜೈಶಂಕರ್, ಜಮ್ಮು - ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್ 370 ರದ್ದು ಮಾಡಿದ ಬಳಿಕ ಕೇಂದ್ರಾಡಳಿತ ಪ್ರದೇಶವನ್ನಾಗಿ ಜಮ್ಮು-ಕಾಶ್ಮೀರ್ ಹಾಗೂ ಲಡಾಕ್ ಪ್ರತ್ಯೇಕ ಮಾಡಲಾಗಿದೆ. ಪಾಕ್ನೊಂದಿಗೆ ಸೇರಿ ಚೀನಾ ಕೂಡ ಈ ವಿಷಯಕ್ಕೆ ಬೆಂಬಲ ನೀಡಲು ಮುಂದಾಗಿತ್ತು. ಆದರೆ, ಇದೀಗ ಪಾಕ್ಗೆ ಈ ವಿಷಯದಲ್ಲಿ ಡ್ರ್ಯಾಗನ್ ರಾಷ್ಟ್ರ ಸಪೋರ್ಟ್ ಮಾಡಲು ನಿರಾಕರಣೆ ಮಾಡುವ ಸಾಧ್ಯತೆ ದಟ್ಟವಾಗಿದೆ.