ಕಾಬೂಲ್ (ಅಫ್ಘಾನಿಸ್ತಾನ):ಕಾಬೂಲ್ ವಿಶ್ವವಿದ್ಯಾಲಯದ ದಾಳಿಯ ಮಾಸ್ಟರ್ ಮೈಂಡ್ ಮೊಹಮ್ಮದ್ ಆದಿಲ್ಗೆ ಸುಪ್ರೀಂಕೋರ್ಟ್ ಮರಣದಂಡನೆ ವಿಧಿಸಿದೆ ಎಂದು ಆಂತರಿಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ದೇಶದ್ರೋಹ, ಸ್ಫೋಟಕ ವಸ್ತುಗಳ ವರ್ಗಾವಣೆ ಮತ್ತು ದಾಯಿಶ್ ಸಂಘಟನೆಯೊಂದಿಗೆ ಸಹಕಾರದ ಆರೋಪದ ಮೇಲೆ ದಾಳಿಯ ಇತರ ಐವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಅಫ್ಘನ್ ಸುಪ್ರೀಂಕೋರ್ಟ್ ಹೇಳಿಕೆಯನ್ನು ಉಲ್ಲೇಖಿಸಿ, ಮಾಧ್ಯಮವೊಂದು ವರದಿ ಮಾಡಿದೆ.
ನವೆಂಬರ್ 2 ರಂದು, ಇಬ್ಬರು ಬಂದೂಕುಧಾರಿಗಳು ಕಾಬೂಲ್ ವಿಶ್ವವಿದ್ಯಾಲಯದ ಮೇಲೆ ನಡೆಸಿದ್ದ ದಾಳಿಯಲ್ಲಿ 22 ಜನರು ಸಾವನ್ನಪ್ಪಿದರು ಮತ್ತು 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಮೃತ 18 ಮಂದಿಯ ಪೈಕಿ ಸಾರ್ವಜನಿಕ ಆಡಳಿತ ವಿಭಾಗದ 16 ವಿದ್ಯಾರ್ಥಿಗಳು ಮತ್ತು ಇಬ್ಬರು ಕಾನೂನು ಅಧ್ಯಾಪಕರು ಪ್ರಾಣ ಕಳೆದುಕೊಂಡಿದ್ದರು. 16 ವಿದ್ಯಾರ್ಥಿಗಳಲ್ಲಿ ಹತ್ತು ಮಂದಿ ಮಹಿಳಾ ವಿದ್ಯಾರ್ಥಿಗಳಾಗಿದ್ದರು ಎಂದು ವರದಿಯಾಗಿತ್ತು.
ಕಾಬೂಲ್ ವಿಶ್ವವಿದ್ಯಾಲಯದ ದಾಳಿಗೆ ಅಫ್ಘಾನಿಸ್ತಾನದ ಮೊದಲ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ತಾಲಿಬಾನ್‌ನಲ್ಲಿ ಮೇಲೆ ಆರೋಪ ಮಾಡಿದ್ದರು. ಆದರೆ, ತಾಲಿಬಾನ್ ಸಂಘಟನೆ ಈ ಆರೋಪವನ್ನು ತಿರಸ್ಕರಿಸಿತ್ತು.