ಕಾಬೂಲ್(ಅಫ್ಘಾನಿಸ್ತಾನ):ಅಫ್ಘಾನ ರಾಜಧಾನಿಯಲ್ಲಿ ಬುಧವಾರ ನಡೆದ ಬಾಂಬ್ ದಾಳಿಯಲ್ಲಿ ಹತ್ತು ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 12 ಮಂದಿ ಗಾಯಗೊಂಡಿದ್ದಾರೆ. ದೇಶದ ಉಪಾಧ್ಯಕ್ಷರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರದ ವಕ್ತಾರ ರಜ್ವಾನ್ ಮುರಾದ್ ಅವರ ಪ್ರಕಾರ, ಬುಧವಾರ ಬೆಳಗ್ಗೆ ಕಾಬೂಲ್ನಲ್ಲಿ ನಡೆದ ಬಾಂಬ್ ದಾಳಿಯು ಅಫ್ಘಾನಿಸ್ತಾನದ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಅವರ ಬೆಂಗಾವಲನ್ನು ಗುರಿಯಾಗಿಸಿಕೊಂಡಿತ್ತು.