ಕರ್ನಾಟಕ

karnataka

ETV Bharat / international

ಪಾಕ್ ಕುತಂತ್ರ; ಉಗ್ರ ಹಫೀಜ್ ಸಯೀದ್​​ ಮೇಲಿನ ನಿರ್ಬಂಧ ತೆರವು - ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿದ್ದ ಭಯೋತ್ಪಾದಕ, ಜೆಯುಡಿ ಮುಖ್ಯಸ್ಥ ಹಫೀಜ್​ ಸೈಯದ್

ಹಫೀಜ್​ ಸಯೀದ್​ ಮತ್ತು ಜಮಾತ್-ಉದ್-ದಾವಾ ನಾಯಕರ ಬ್ಯಾಂಕ್ ಖಾತೆಗಳನ್ನು ಮರುಸ್ಥಾಪಿಸಲಾಗಿದೆ.

ಹಫೀಜ್​ ಸೈಯದ್
ಹಫೀಜ್​ ಸೈಯದ್

By

Published : Jul 12, 2020, 10:57 PM IST

ಇಸ್ಲಾಮಾಬಾದ್: ಭಾರತ ಹಾಗೂ ವಿಶ್ವದಲ್ಲಿ ಉಗ್ರವಾದಿ ಚಟುವಟಿಕೆ ನಡೆಸುತ್ತಿರುವ ಜಮಾತ್-ಉದ್​-ದಾವಾ (Jamaat-ud-Dawa -JuD) ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಹಾಗೂ ಅದರ ಮುಖ್ಯಸ್ಥರ ಬ್ಯಾಂಕ್​ ಖಾತೆಗಳ ಮೇಲಿನ ನಿರ್ಬಂಧವನ್ನು ಕುತಂತ್ರಿ ಪಾಕಿಸ್ತಾನ ಸರ್ಕಾರ ತೆರವುಗೊಳಿಸಿದೆ.
ವಿಶ್ವಸಂಸ್ಥೆಯ ಅನುಮೋದನಾ ಸಮಿತಿಯ ಅನುಮತಿಯ ನಂತರ ಪಾಕ್ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.
ಬ್ಯಾಂಕ್ ಖಾತೆ ಸ್ಥಗಿತಗೊಳಿಸಿರುವುದರಿಂದ ತನ್ನ ಕುಟುಂಬ ನಿರ್ವಹಣೆ ಕಷ್ಟವಾಗಿದೆ, ಖಾತೆಯನ್ನು ಸಕ್ರಿಯಗೊಳಿಸಬೇಕೆಂದು ಎಂದು ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಜ್ ಸಯೀದ್ ವಿಶ್ವಸಂಸ್ಥೆಗೆ ಮನವಿ ಮಾಡಿದ್ದರಿಂದ ಖಾತೆಗಳನ್ನು ಸಕ್ರಿಯಗೊಳಿಸಲಾಗಿದೆ ಎಂದು ಇಮ್ರಾನ್ ಖಾನ್ ನೇತೃತ್ವದ ಪಾಕ್ ಸರ್ಕಾರ ಸಮರ್ಥಿಸಿಕೊಂಡಿದೆ.

For All Latest Updates

ABOUT THE AUTHOR

...view details