ಕರ್ನಾಟಕ

karnataka

ETV Bharat / international

ಭಾರತಕ್ಕೆ ವೆಂಟಿಲೇಟರ್‌, ಆಮ್ಲಜನಕ ಉತ್ಪಾದಕ ಕಳುಹಿಸಲಿರುವ ಜಪಾನ್ - ಭಾರತ-ಜಪಾನ್​ ರಾಯಭಾರಿ ಸತೋಶಿ ಸುಜುಕಿ

ಭಾರತಕ್ಕೆ ಜಪಾನ್​ ದೇಶ ಸಹಾಯಹಸ್ತ ನೀಡಿದ್ದು, 300 ಆಮ್ಲಜನಕ ಉತ್ಪಾದಕಗಳು ಮತ್ತು 300 ವೆಂಟಿಲೇಟರ್​ಗಳನ್ನು ಒದಗಿಸಲಿದೆ.

Japan
ಜಪಾನ್​ ಬೆಂಬಲ

By

Published : Apr 30, 2021, 10:52 AM IST

ಟೋಕಿಯೊ:ಭಾರತದ ಕೊರೊನಾ ವಿರುದ್ಧದ ಹೋರಾಟಕ್ಕೆ ಜಪಾನ್​ ದೇಶವೂ ಕೂಡಾ ಕೈಜೋಡಿಸುತ್ತಿದ್ದು, 300 ಆಮ್ಲಜನಕ ಉತ್ಪಾದಕಗಳು ಮತ್ತು ವೆಂಟಿಲೇಟರ್​ಗಳನ್ನು ಒದಗಿಸಲಿದೆ ಎಂದು ಜಪಾನ್​ ರಾಯಭಾರಿ ಸತೋಶಿ ಸುಜುಕಿ ತಿಳಿಸಿದ್ದಾರೆ.

"ಜಪಾನ್ ತುರ್ತು ಸಮಯದಲ್ಲಿ ಭಾರತದೊಂದಿಗೆ ನಿಂತಿದೆ. 300 ಆಮ್ಲಜನಕ ಉತ್ಪಾದಕಗಳು ಮತ್ತು 300 ವೆಂಟಿಲೇಟರ್‌ಗಳನ್ನು ಒದಗಿಸಲು ನಿರ್ಧರಿಸಿದ್ದೇವೆ" ಎಂದು ಟ್ವೀಟ್ ಮಾಡಿದ್ದಾರೆ.

ಏ.28ರಂದು ವಿದೇಶಾಂಗ ಕಾರ್ಯದರ್ಶಿ ಹರ್ಷ ಶ್ರೀಂಗ್ಲಾ ಅವರು, "ಜಪಾನ್ ಅಂತಾರಾಷ್ಟ್ರೀಯ ಸಹಕಾರದಲ್ಲಿ ನಿಕಟ ಪಾಲುದಾರರಾಗಿರುವ ಜಪಾನ್​ ಭಾರತದ ಹಲವು ಅವಶ್ಯಕತೆಗಳಿಗೆ ಸ್ಪಂದಿಸುತ್ತಿದೆ" ಎಂದು ಹೇಳಿದ್ದರು.

"ಅಂತಾರಾಷ್ಟ್ರೀಯ ಸಹಕಾರದ ವಿಷಯದಲ್ಲಿ ಪ್ರಾಮುಖ್ಯತೆ ಇರುವ ಯಾವುದೇ ಕ್ಷೇತ್ರಗಳಲ್ಲಿ ಜಪಾನ್ ಬಹಳ ನಿಕಟ ಪಾಲುದಾರನಾಗಿದ್ದು, ನಮ್ಮ ಅನೇಕ ಅವಶ್ಯಕತೆಗಳಿಗೆ ಜಪಾನ್ ಸ್ಪಂದಿಸುತ್ತಿರುವುದಕ್ಕೆ ನಾವು ತುಂಬಾ ಸಂತೋಷಪಡುತ್ತೇವೆ. ಜಪಾನ್ ದೇಶ ಸಾಂದ್ರಕಗಳು ಸೇರಿದಂತೆ ಹಲವಾರು ವಸ್ತುಗಳನ್ನು ಈಗಾಗಲೇ ನೀಡಿದೆ" ಎಂದು ಅವರು ವಿಶೇಷ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದರು.

ABOUT THE AUTHOR

...view details