ಟೋಕಿಯೋ , ಜಪಾನ್:ಜನರಲ್ಲಿ ಮಾನಸಿಕ ಖಿನ್ನತೆಯನ್ನು ಹೋಗಲಾಡಿಸಿ, ಆತ್ಮಹತ್ಯೆಗಳನ್ನು ಕಡಿಮೆ ಮಾಡುವ ಸಲುವಾಗಿ ಜಪಾನ್ನಲ್ಲಿ ಹೊಸ ಖಾತೆ ರಚಿಸಲಾಗಿದ್ದು, ಸಚಿವರನ್ನು ಕೂಡ ನೇಮಕ ಮಾಡಲಾಗಿದೆ.
ಜಪಾನ್ ಸರ್ಕಾರ 'ಲೋನ್ಲಿನೆಸ್' ಅಂದರೆ ಒಂಟಿತನ ನಿವಾರಣಾ ಖಾತೆಯನ್ನು ಸೃಷ್ಟಿಸಿದ್ದು, ಈ ಮೂಲಕ ಜನರಲ್ಲಿ ಒಂಟಿತನವನ್ನು ಹೋಗಲಾಡಿಸಿ, ಆತ್ಮಹತ್ಯೆ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಗಮನಹರಿಸಲಾಗಿದೆ.
ಟೆಟ್ಶುಶಿ ಸುಕಮೋಟೋ ಹೊಸ ಖಾತೆಗೆ ಸಚಿವರಾಗಲಿದ್ದು, ಈಗಾಗಲೇ ರಾಷ್ಟ್ರದಲ್ಲಿ ಜನನ ಸಂಖ್ಯೆ ಇಳಿಕೆ, ಪ್ರಾದೇಶಿಕ ಆರ್ಥಿಕತೆ ಮುಂತಾದ ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ:ಸ್ಟಾರ್ಟ್ಅಪ್ ಪಿಕ್ಸೆಲ್ 'ಆನಂದ್' ಉಪಗ್ರಹ ಉಡಾವಣೆ ವಿಳಂಬ: ಕಾರಣವೇನು ಗೊತ್ತೇ?
ಖಾತೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವ ಟೆಟ್ಶುಶಿ ಸುಕಮೋಟೋ, ಹೊಸ ಖಾತೆಗೆ ನನ್ನನ್ನು ಪ್ರಧಾನಮಂತ್ರಿ ಯೋಶಿಹಿಡೆ ಸುಗಾ ನೇಮಕ ಮಾಡಿದ್ದಾರೆ. ಕೊರೊನಾ ಹಾವಳಿಯ ಸಮಯದಲ್ಲಿ ಸಾಕಷ್ಟು ಮಹಿಳೆಯರ ಆತ್ಮಹತ್ಯೆ ಪ್ರಮಾಣ ಹೆಚ್ಚಾಗಿದ್ದು, ಅವರಲ್ಲಿನ ಖಿನ್ನತೆಯನ್ನು ಹೋಗಲಾಡಿಸಿ, ಆತ್ಮಹತ್ಯೆ ನಿಯಂತ್ರಣಕ್ಕೆ ತರಲು ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
ಈ ಒಂಟಿತನ ನಿವಾರಣಾ ಖಾತೆಯಿಂದ ಕೆಲವೊಂದು ಕಚೇರಿಗಳನ್ನು ಸ್ಥಾಪನೆ ಮಾಡಲಾಗಿದ್ದು, ಆತ್ಮಹತ್ಯೆ ಮತ್ತು ಬಡತನ ಎಂಬ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳುತ್ತದೆ.