ಕರ್ನಾಟಕ

karnataka

ETV Bharat / international

'ಅಬೆ' ಕ್ಯಾ ಕಿಯಾ?.. ಜಪಾನ್​ ಪ್ರಧಾನಿ ಕೊಟ್ಟ ಉಚಿತ ಮಾಸ್ಕ್ ಗುಣಮಟ್ಟದ ಬಗ್ಗೆ ಟೀಕೆ, ವಿತರಣೆ ರದ್ದು

ಒಬ್ಬರಿಗೆ ಒಂದು ಮಾಸ್ಕ್ ಕೊಡುವ ಬದಲು, ಒಂದು ಮನೆಗೆ 2 ಮಾಸ್ಕ್ ಕೊಡುವ ಕ್ರಮವನ್ನು ಕೆಲವರು ಪ್ರಶ್ನಿಸಿದರೆ, ಇನ್ನೂ ಕೆಲವರು ಮಾಸ್ಕ್​ನ ಗುಣಮಟ್ಟ ಹಾಗೂ ಪರಿಣಾಮಕಾರಿತ್ವವನ್ನು ಅನುಮಾನಿಸಿದರು. ಹೀಗಾಗಿ ಜಪಾನ್ ಸರ್ಕಾರವು ಉಚಿತ ಮಾಸ್ಕ್ ವಿತರಣಾ ಕಾರ್ಯವನ್ನು ನಿಲ್ಲಿಸಿದೆ.

shinjo abe
shinjo abe

By

Published : Apr 29, 2020, 9:45 AM IST

ಟೋಕಿಯೋ (ಜಪಾನ್):ಅಪಹಾಸ್ಯ ಹಾಗೂ ಟೀಕೆಯ ಕಾರಣದಿಂದಾಗಿ ಜಪಾನ್ ಸರ್ಕಾರವು ಉಚಿತ ಮಾಸ್ಕ್ ವಿತರಣಾ ಕಾರ್ಯವನ್ನು ನಿಲ್ಲಿಸಿದೆ.

ಜಪಾನ್ ಪ್ರಧಾನಿ ಶಿಂಜೊ ಅಬೆ ಪ್ರಾರಂಭಿಸಿದ ಉಚಿತ ಮಾಸ್ಕ್ ವಿತರಣಾ ಕಾರ್ಯವನ್ನು ಪ್ರಶ್ನಿಸಲು ಆರಂಭಿಸಿದ ಜನ, "ಅಬೆನೊಮಾಸ್ಕ್" ಎಂದು ಗೇಲಿ ಮಾಡಲು ಪ್ರಾರಂಭಿಸಿದ್ದರು.

ಒಬ್ಬರಿಗೆ ಒಂದು ಮಾಸ್ಕ್ ಕೊಡುವ ಬದಲು, ಒಂದು ಮನೆಗೆ 2 ಮಾಸ್ಕ್ ಕೊಡುವ ಕ್ರಮವನ್ನು ಕೆಲವರು ಪ್ರಶ್ನಿಸಿದರೆ, ಇನ್ನೂ ಕೆಲವರು ಮಾಸ್ಕ್​ನ ಗುಣಮಟ್ಟ ಹಾಗೂ ಪರಿಣಾಮವನ್ನು ಅನುಮಾನಿಸಿದರು.

ಮಾಸ್ಕ್​ಗಳು ಬಟ್ಟೆಯಿಂದ ಮಾಡಲ್ಪಟ್ಟಿದ್ದು, ಮೂಗು ಅಥವಾ ಮುಖದ ಕೆಳಭಾಗವನ್ನು ಸಂಪೂರ್ಣವಾಗಿ ಮುಚ್ಚುವುದಿಲ್ಲ ಎಂದು ಜನರು ಆರೋಪಿಸಿದರು. ಶಿಂಜೊ ಅಬೆ ಸ್ವತಃ ಮಾಸ್ಕ್​ ಧರಿಸಿ ಕಾಣಿಸಿಕೊಂಡರೂ, ಅದರ ಕುರಿತು ಹಲವು ಜೋಕ್ ಹಾಗೂ ಮೀಮ್​​ಗಳು ಸೃಷ್ಟಿಯಾದವು. ಹೀಗಾಗಿ ಜಪಾನ್ ಸರ್ಕಾರವು ಮಾಸ್ಕ್ ವಿತರಣಾ ಕಾರ್ಯವನ್ನು ನಿಲ್ಲಿಸಿದೆ.

ABOUT THE AUTHOR

...view details