ಕರ್ನಾಟಕ

karnataka

ETV Bharat / international

ಚೀನಾ ಕಮ್ಯುನಿಸ್ಟ್ ಪಕ್ಷ ಸೇರುವ ಇಚ್ಚೆ ವ್ಯಕ್ತಪಡಿಸಿದ ಹಾಲಿವುಡ್​​ನ ಮಾರ್ಷಲ್​ ಆರ್ಟ್ಸ್ ಕಿಂಗ್ - ಕಮ್ಯುನಿಸ್ಟ್ ಪಕ್ಷ

ನಾನು ಸಿಪಿಸಿ ಸದಸ್ಯನಾಗಲು ಬಯಸುತ್ತೇನೆ ಎಂದಿರುವ ಅವರು ಹಲವಾರು ವರ್ಷಗಳಿಂದ ಸಿಪಿಸಿಯ ಬೆಂಬಲಿಗರಾಗಿದ್ದಾರೆ ಮತ್ತು ಚೀನಾದ ಜನರ ರಾಜಕೀಯ ಸಮಾಲೋಚನಾ ಸಮ್ಮೇಳನದ (ಸಿಪಿಪಿಸಿಸಿ) ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಕಮ್ಯುನಿಸ್ಟ್ ಪಕ್ಷಕ್ಕೆ ಸೇರುವ ಇಚ್ಚೆ ವ್ಯಕ್ತಪಡಿಸಿದ ಜಾಕಿ ಚಾನ್
ಕಮ್ಯುನಿಸ್ಟ್ ಪಕ್ಷಕ್ಕೆ ಸೇರುವ ಇಚ್ಚೆ ವ್ಯಕ್ತಪಡಿಸಿದ ಜಾಕಿ ಚಾನ್

By

Published : Jul 12, 2021, 10:18 PM IST

Updated : Jul 12, 2021, 10:44 PM IST

ಚೀನಾ: ಸಮರ ಕಲೆಗಳ ಪ್ರತಿಭೆ ಮತ್ತು ವಿಶ್ವವೇ ಗುರುತಿಸಿದ, ಪ್ರಭಾವಶಾಲಿ ಚಲನಚಿತ್ರ ನಟರಲ್ಲಿ ಒಬ್ಬರಾದ ಜಾಕಿ ಚಾನ್ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ) ಗೆ ಸೇರಲು ಆಸಕ್ತಿ ವ್ಯಕ್ತಪಡಿಸಿದ್ದಾರೆ.

ಹಿಂದಿನ ಬ್ರಿಟಿಷ್ ವಸಾಹತು ಪ್ರದೇಶದಲ್ಲಿ ಪ್ರಜಾಪ್ರಭುತ್ವ ಪರ ಪ್ರತಿಭಟನೆಗಳ ಮೇಲೆ ಬೀಜಿಂಗ್ ನಡೆಸಿದ ದಬ್ಬಾಳಿಕೆಯನ್ನು ಬೆಂಬಲಿಸಿದ್ದಕ್ಕಾಗಿ 67ರ ಜಾಕಿ ಚಾನ್ ಈ ಹಿಂದೆ ತೀವ್ರ ಟೀಕೆಗೆ ಗುರಿಯಾಗಿದ್ದರು.

ಕಳೆದ ಗುರುವಾರ ಬೀಜಿಂಗ್‌ನಲ್ಲಿ ನಡೆದ ವಿಚಾರ ಸಂಕಿರಣವೊಂದರಲ್ಲಿ ಸಿಪಿಸಿಗೆ ಸೇರ್ಪಡೆಗೊಳ್ಳುವ ಇಚ್ಚೆಯನ್ನು ವ್ಯಕ್ತಪಡಿಸಿದ್ದಾರೆ. ವಿಚಾರ ಸಂಕಿರಣದಲ್ಲಿ, ಚೀನಾ ಫಿಲ್ಮ್ ಅಸೋಸಿಯೇಷನ್‌ನ ಉಪಾಧ್ಯಕ್ಷರೂ ಆಗಿರುವ ಚಾನ್ ಅವರು ಸಿಪಿಸಿಗೆ ಸೇರ್ಪಡೆಗೊಳ್ಳುವ ಆಸಕ್ತಿಯ ಬಗ್ಗೆ ಮಾತನಾಡಿದ್ದಾರೆ.

ನಾನು ಸಿಪಿಸಿ ಸದಸ್ಯನಾಗಲು ಬಯಸುತ್ತೇನೆ ಎಂದಿರುವ ಅವರು ಹಲವಾರು ವರ್ಷಗಳಿಂದ ಸಿಪಿಸಿಯ ಬೆಂಬಲಿಗರಾಗಿದ್ದಾರೆ ಮತ್ತು ಚೀನಾದ ಜನರ ರಾಜಕೀಯ ಸಮಾಲೋಚನಾ ಸಮ್ಮೇಳನದ (ಸಿಪಿಪಿಸಿಸಿ) ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ನಾನು ಈವರೆಗೆ ಅನೇಕ ದೇಶಗಳಿಗೆ ಭೇಟಿ ನೀಡಿದ್ದೇನೆ. ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ನಾನು ಹೋದಲ್ಲೆಲ್ಲಾ ಚೈನೀಸ್ ಆಗಿರುವುದರ ಬಗ್ಗೆ ನನಗೆ ಹೆಮ್ಮೆ ಇದೆ. ಐದು-ನಕ್ಷತ್ರಗಳ ಕೆಂಪು ಧ್ವಜವನ್ನು ಜಗತ್ತಿನ ಎಲ್ಲೆಡೆ ಗೌರವಿಸಲಾಗುತ್ತದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Last Updated : Jul 12, 2021, 10:44 PM IST

ABOUT THE AUTHOR

...view details