ನವದೆಹಲಿ:ಚೀನಾದ ಅತಿ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಅಲಿಬಾಬಾ ಮತ್ತು ಆ್ಯಂಟ್ ಗ್ರೂಪ್ಗಳ ಸಂಸ್ಥಾಪಕ ಜಾಕ್ ಮಾ ಅಲ್ಲಿನ ಕಾನೂನುಗಳ ಕಾರಣದಿಂದ ಹಿನ್ನಡೆ ಅನುಭವಿಸುವಂತಾಗಿದೆ.
ಮಂಗಳವಾರ ಹುರುನ್ ಗ್ಲೋಬಲ್ ರಿಚ್-2021 ಪಟ್ಟಿ ಬಿಡುಗಡೆ ಮಾಡಿದ್ದು, ಈ ವರದಿ ಪ್ರಕಾರ ಜಾಕ್ ಮಾ ಆಧಾಯ 55 ಬಿಲಿಯನ್ ಯುಎಸ್ ಡಾಲರ್ಗಳಷ್ಟಿದೆ. ಈ ಮೊದಲು ಚೀನಾದಲ್ಲೇ ಅತಿ ಶ್ರೀಮಂತರ ಪಟ್ಟಿಯಲ್ಲಿದ್ದ ಜಾಕ್ ಮಾ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ.
57 ವರ್ಷದ ಜಾಕ್ ಮಾ ಹಿಂದಿನ ವರ್ಷ ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮೊದಲ ಮೂರು ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಚೀನಾದ ಕಾನೂನುಗಳು ಅಲಿಬಾಬಾ ಮತ್ತು ಆ್ಯಂಟ್ ಗ್ರೂಪ್ನ ಮೇಲೆ ಮಾಡಿರುವ ದುಷ್ಪರಿಣಾಮಗಳೇ ಇದೆಲ್ಲಕ್ಕೂ ಕಾರಣ ಎಂದು ಹುರುನ್ ಗ್ಲೋಬಲ್ ರಿಚ್-2021 ಹೇಳಿದೆ.'