ಕರ್ನಾಟಕ

karnataka

ETV Bharat / international

ಮಗಳಿಗೆ ಕೋವಿಡ್ ಸೋಂಕು : ಕ್ವಾರಂಟೈನ್​ಗೆ ಒಳಗಾದ ಇಸ್ರೇಲ್​ ಪ್ರಧಾನಿ ನಫ್ತಾಲಿ ಬೆನೆಟ್

ಕೊರೊನಾ ರೂಪಾಂತರಿ ತಳಿ ಒಮಿಕ್ರಾನ್ ವೈರಸ್​ ವೇಗವಾಗಿ ಹರಡುತ್ತಿರುವ ಬೆನ್ನಲ್ಲೇ ಇಸ್ರೇಲ್​ನಲ್ಲಿ ಕೋವಿಡ್-19 ಪ್ರಕರಣಗಳು ಉಲ್ಬಣಗೊಳ್ಳುತ್ತಿದ್ದು, ದೇಶದಲ್ಲಿ ಆತಂಕ ಮನೆ ಮಾಡಿದೆ..

ನಫ್ತಾಲಿ ಬೆನೆಟ್, Naftali Bennett
ನಫ್ತಾಲಿ ಬೆನೆಟ್

By

Published : Dec 27, 2021, 12:22 PM IST

ಟೆಲ್ ಅವಿವ್: ಇಸ್ರೇಲ್​ ಪ್ರಧಾನಿ ನಫ್ತಾಲಿ ಬೆನೆಟ್ ಅವರ ಮಗಳಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆ ಇಸ್ರೇಲ್​ ಪಿಎಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ನಫ್ತಾಲಿ ಬೆನೆಟ್ ಅವರ 14 ವರ್ಷದ ಮಗಳಿಗೆ ಕೊರೊನಾ ಸೋಂಕು ತಗಲಿದೆ. ಆಕೆಯ ಜೊತೆ ಸಂಪರ್ಕ ಹೊಂದಿದವರನ್ನು ಪತ್ತೆ ಹಚ್ಚಲಾಗುತ್ತಿದೆ. ಬೆನೆಟ್ ಅವರ ಪತ್ನಿ ಮತ್ತು ಇತರೆ ಮಕ್ಕಳಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದ್ದು, ನೆಗೆಟಿವ್ ವರದಿ ಬಂದಿದೆ. ​

ಪ್ರಧಾನಿಯವರು ಕ್ವಾರಂಟೈನ್ ಆಗಿರುವುದರಿಂದ ಗೋಲನ್ ಹೈಟ್ಸ್‌ನಲ್ಲಿ ನಡೆದ ವಿಶೇಷ ಕ್ಯಾಬಿನೆಟ್ ಸಭೆಯಲ್ಲಿ ಭಾಗವಹಿಸಿಲ್ಲ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ತಿಳಿಸಿದೆ.

ಕೊರೊನಾ ರೂಪಾಂತರಿ ತಳಿ ಒಮಿಕ್ರಾನ್ ವೈರಸ್​ ವೇಗವಾಗಿ ಹರಡುತ್ತಿರುವ ಬೆನ್ನಲ್ಲೇ ಇಸ್ರೇಲ್​ನಲ್ಲಿ ಕೋವಿಡ್-19 ಪ್ರಕರಣಗಳು ಉಲ್ಬಣಗೊಳ್ಳುತ್ತಿದ್ದು, ದೇಶದಲ್ಲಿ ಆತಂಕ ಮನೆಮಾಡಿದೆ.

ABOUT THE AUTHOR

...view details