ಕರ್ನಾಟಕ

karnataka

ETV Bharat / international

ಕೊರೊನಾ ಲಸಿಕೆಗೆ ಬೇಕಾದ ಕೋವಿಡ್​ ಅಣುಗಳನ್ನು ಗುರುತಿಸಿದ ಇಸ್ರೇಲ್ ಸಂಶೋಧಕರು

ಕೊರೊನಾ ವೈರಸ್​ ಗುಣಪಡಿಸಲು ಬೇಕಾದ ಲಸಿಕೆ ತಯಾರಿಗೆ ಎಲ್ಲ ರಾಷ್ಟ್ರಗಳು ಪ್ರಯತ್ನ ನಡೆಸುತ್ತಿದ್ದು, ಈ ನಡುವೆ ಇಸ್ರೇಲ್​ನಿಂದ ಶುಭಸುದ್ದಿಯೊಂದು ಸಿಕ್ಕಿದೆ.

vaccine
ಕೊರೊನಾ ಲಸಿಕೆ

By

Published : Jun 12, 2020, 1:04 PM IST

ಟೆಲ್ ಅವೀವ್ (ಇಸ್ರೇಲ್): ಕೊರೊನಾ ವೈರಸ್​ ಗುಣಪಡಿಸಲು ಬೇಕಾದ ಲಸಿಕೆ ಅಭಿವೃದ್ಧಿಗೆ ಅಗತ್ಯವಿರುವ ವೈರಸ್ ಅಣು(molecules)ಗಳನ್ನು ಸಂಶೋಧಕರು ಗುರುತಿಸಿದ್ದಾರೆ ಎಂದು ಮಧ್ಯ ಇಸ್ರೇಲ್‌ನ ಬಾರ್ ಇಲಾನ್ ವಿಶ್ವವಿದ್ಯಾಲಯ (BIU) ತಿಳಿಸಿದೆ.

ಎಂಡಿಪಿಐ ವ್ಯಾಕ್ಸಿನ್ಸ್​ ಎಂಬ ಜರ್ನಲ್‌ನಲ್ಲಿ ಗುರುವಾರ ಪ್ರಕಟವಾದ ಅಧ್ಯಯನವೊಂದರಲ್ಲಿ, ಬಿಐಯು ಸಂಶೋಧಕರು ಪ್ರತಿಜನಕ ಅಣು(antigen molecules)ಗಳನ್ನು ಪರೀಕ್ಷಿಸಿದ್ದಾರೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದೆ.

ವೈರಸ್​ನ ಪ್ರೋಟೀನ್ ಗುಂಪಿನಲ್ಲಿ ಸಂಭಾವ್ಯ ಎಪಿಟೋಪ್​(ಪ್ರತಿಕಾಯವು ತನ್ನನ್ನು ತಾನೇ ಜೋಡಿಸಿಕೊಳ್ಳುವ ಪ್ರತಿಜನಕ ಅಣುವಿನ ಭಾಗ)ಗಳ ಒಂದು ಗುಂಪು ಮತ್ತು ಪ್ರತಿಜನಕ ಅಣುಗಳ ಪ್ರೋಟೀನ್ ಭಾಗಗಳನ್ನು ಈ ತಂಡ ಗುರುತಿಸಿದೆ. ಈ ಎಪಿಟೋಪ್‌ಗಳು ಪ್ರತಿಕಾಯ ಮತ್ತು ಕೋಶ - ಮಧ್ಯಸ್ಥಿಕೆಯ ರೋಗ ನಿರೋಧಕತೆಯನ್ನು ಉಂಟುಮಾಡಬಹುದು ಎಂದು ತಂಡ ತಿಳಿಸಿದೆ.

ಲಸಿಕೆ

ವೈರಸ್​ನ ಎಪಿಟೋಪ್​ಗಳನ್ನು ಗುರುತಿಸಿ ಅದು ತೀವ್ರವಾದ ರೋಗನಿರೋಧಕ ಪ್ರತಿಕ್ರಿಯೆಯನ್ನು ಪ್ರಚೋದಿಸುವುದನ್ನು ತಂಡ ಗುರುತಿಸಿದೆ.

ಹೀಗಾಗಿ, ತಂಡವು ವೈರಸ್‌ಗಳಲ್ಲಿ ರೋಗನಿರೋಧಕ ಪ್ರತಿಕ್ರಿಯೆಯನ್ನು ಉಂಟುಮಾಡುವ 15 ಸಂಭಾವ್ಯ ಪ್ರದೇಶಗಳನ್ನು ಗುರುತಿಸಿದೆ. ಅಲ್ಲದೇ ವೈರಸ್‌ನ ಇತರ ಪ್ರೋಟೀನ್‌ಗಳ ಮೇಲೆ ಅಂತಹ 25 ಎಪಿಟೋಪ್‌ಗಳನ್ನು ಮ್ಯಾಪ್ ಮಾಡಿದೆ.

ತಂಡದ ಪ್ರಕಾರ, ವಿಶ್ವಾದ್ಯಂತ ವೈರಸ್ ಪೀಡಿತ ಜನಸಂಖ್ಯೆಯ ಶೇ. 87 ಕ್ಕಿಂತ ಹೆಚ್ಚು ಜನರಲ್ಲಿ ಏಳು ಎಪಿಟೋಪ್​ಗಳಿವೆ ಎಂದು ಪರಿಗಣಿಸಲಾಗಿದೆ. ಅವರ ಅಲರ್ಜಿಯಲ್ಲದ ಮತ್ತು ವಿಷಕಾರಿಯಲ್ಲದ ಸ್ವಭಾವಗಳನ್ನು ಪರಿಶೀಲಿಸಲು ಮತ್ತು ಜೊತೆಗೆ ಅವು ಯಾವುದೇ ಸ್ವಯಂ ನಿರೋಧಕ ಪ್ರತಿಕ್ರಿಯೆಗಳನ್ನು ಪ್ರಚೋದಿಸುವ ಕಡಿಮೆ ಅಪಾಯವನ್ನು ಹೊಂದಿವೆ ಎಂಬುದನ್ನು ನಿರೂಪಿಸಲು ಈ ಏಳು ಎಪಿಟೋಪ್‌ಗಳನ್ನು ಅನೇಕ ಸಾಧನಗಳನ್ನು ಬಳಸಿ ಪರೀಕ್ಷಿಸಲಾಗಿದೆ.

ABOUT THE AUTHOR

...view details