ಢಾಕಾ(ಬಾಂಗ್ಲಾದೇಶ) :ಹೋಳಿ ಹಬ್ಬದ ಸಂಭ್ರಮದಲ್ಲಿರುವಾಗಲೇ ಬಾಂಗ್ಲಾದೇಶದ ಢಾಕಾದಲ್ಲಿರುವ ಇಸ್ಕಾನ್ ದೇವಸ್ಥಾನದ ಮೇಲೆ ದಾಳಿ ನಡೆಸಲಾಗಿದೆ. ಸುಮಾರು 200ಕ್ಕೂ ಅಧಿಕ ದುಷ್ಕರ್ಮಿಗಳು ಈ ದುಷ್ಕೃತ್ಯದಲ್ಲಿ ತೊಡಗಿದ್ದರು ಎಂಬ ಮಾಹಿತಿ ದೊರೆತಿದೆ.
ದೇವಸ್ಥಾನ ಧ್ವಂಸ ಮಾಡುತ್ತಿರುವ ಅನೇಕ ವಿಡಿಯೋಗಳು ವೈರಲ್ ಆಗಿದ್ದು, ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಗಳ ಟ್ವಿಟರ್ ಅಕೌಂಟ್ನಲ್ಲೂ ಶೇರ್ ಆಗಿದೆ. ಢಾಕಾದಲ್ಲಿರುವ ಇಸ್ಕಾನ್ ರಾಧಾಕಾಂತ ದೇವಸ್ಥಾನದ ಮೇಲಿನ ದಾಳಿ ಸಂಬಂಧ ಪೊಲೀಸರು ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಹಾಜಿ ಶಫಿವುಲ್ಲಾ ನೇತೃತ್ವದಲ್ಲಿ 200ಕ್ಕೂ ಅಧಿಕ ಮಂದಿ ಮಾರ್ಚ್ 17ರ ರಾತ್ರಿ ಇಸ್ಕಾನ್ ದೇವಸ್ಥಾನದ ಮೇಲೆ ಅಟ್ಯಾಕ್ ಮಾಡಿದ್ದು, ಅಲ್ಲಿನ ಮೂರ್ತಿ, ಹಣ ಸೇರಿದಂತೆ ಬೆಲೆ ಬಾಳುವ ಚಿನ್ನಾಭರಣಗಳನ್ನು ಲೂಟಿ ಮಾಡಿದ್ದಾರೆ ಎಂಬ ಆರೋಪವಿದೆ. ಘಟನೆ ವೇಳೆ ಕೆಲ ಭಕ್ತರಿಗೆ ಗಾಯವಾಗಿರುವುದಾಗಿ ವರದಿಯಾಗಿದೆ.