ಕರ್ನಾಟಕ

karnataka

ETV Bharat / international

ಪಾಕ್​ನಲ್ಲಿ ಭಾರತೀಯ ರಾಜತಾಂತ್ರಿಕರಿಗೆ ಕಿರುಕುಳ.. ವಾಹನ ಬೆನ್ನಟ್ಟಿದ ಐಎಸ್​ಐ ಸಿಬ್ಬಂದಿ - ಗೌರವ್ ಅಹ್ಲುವಾಲಿಯಾ ಕಾರು ಚೇಸ್

ಹಿರಿಯ ಭಾರತೀಯ ರಾಜತಾಂತ್ರಿಕ ಅಧಿಕಾರಿ ಗೌರವ್ ಅಹ್ಲುವಾಲಿಯಾ ಅವರ ವಾಹನವನ್ನು ಪಾಕ್​ನ ಐಎಸ್​ಐ ಸಿಬ್ಬಂದಿ ಬೈಕ್​ನಲ್ಲಿ ಬೆನ್ನಟ್ಟಿದ ವಿಡಿಯೋ ವೈರಲ್ ಆಗಿದೆ.

ISI member chases vehicle
ಗೌರವ್ ಹ್ಲುವಾಲಿಯಾ ವಾಹನ ಬೆನ್ನಟ್ಟಿದ ಐಎಸ್​ಐ ಸಿಬ್ಬಂದಿ

By

Published : Jun 4, 2020, 9:36 PM IST

ಇಸ್ಲಮಾಬಾದ್ (ಪಾಕಿಸ್ತಾನ):ಹಿರಿಯ ಭಾರತೀಯ ರಾಜತಾಂತ್ರಿಕ ಅಧಿಕಾರಿ ಗೌರವ್ ಅಹ್ಲುವಾಲಿಯಾ ಅವರ ವಾಹನವನ್ನು ಪಾಕಿಸ್ತಾನದ ಐಎಸ್​ಐ(Inter-Services Intelligence) ಸದಸ್ಯ ಬೆನ್ನಟ್ಟಿದ್ದು, ಪಾಕಿಸ್ತಾನದಲ್ಲಿ ಭಾರತೀಯ ರಾಜತಾಂತ್ರಿಕರಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪಕ್ಕೆ ಪುಷ್ಟಿ ಸಿಕ್ಕಿದೆ.

ಅಹ್ಲುವಾಲಿಯಾ ಅವರಿಗೆ ಕಿರುಕುಳ ಮತ್ತು ಬೆದರಿಕೆ ಹಾಕಲು ಐಎಸ್‌ಐ ತನ್ನ ನಿವಾಸದ ಹೊರಗೆ ಅನೇಕ ವ್ಯಕ್ತಿಗಳನ್ನು ಕಾರು ಮತ್ತು ಬೈಕ್‌ಗಳಲ್ಲಿ ಇರಿಸಿದೆ ಎಂದು ಮೂಲಗಳು ತಿಳಿಸಿವೆ.

ಮಾರ್ಚ್​ನಲ್ಲಿ, ಪಾಕಿಸ್ತಾನದ ಭಾರತೀಯ ಹೈಕಮಿಷನ್ ತನ್ನ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪಾಕಿಸ್ತಾನದ ಏಜೆನ್ಸಿಗಳು ನಿರಂತರವಾಗಿ ಕಿರುಕುಳ ನೀಡುತ್ತಿರುವುದನ್ನು ವಿರೋಧಿಸಿ ಇಸ್ಲಾಮಾಬಾದ್​ನ ವಿದೇಶಾಂಗ ಸಚಿವಾಲಯಕ್ಕೆ ಪ್ರತಿಭಟನಾ ಟಿಪ್ಪಣಿಯನ್ನು ಕಳುಹಿಸಿತು. ಆ ಟಿಪ್ಪಣಿಯ ಪ್ರಕಾರ, ಭಾರತವು ಮಾರ್ಚ್ ತಿಂಗಳಲ್ಲಿಯೇ 13 ಕಿರುಕುಳದ ಪ್ರಕರಣಗಳನ್ನು ಉಲ್ಲೇಖಿಸಿದೆ ಮತ್ತು ಇಂತಹ ಘಟನೆಗಳನ್ನು ನಿಲ್ಲಿಸಿ, ಈ ಬಗ್ಗೆ ತನಿಖೆ ನಡೆಸುವಂತೆ ಪಾಕಿಸ್ತಾನವನ್ನು ಕೇಳಿದೆ.

ಈ ಘಟನೆಗಳನ್ನು ತುರ್ತಾಗಿ ತನಿಖೆ ಮಾಡಿ ಮತ್ತು ಇದೇ ರೀತಿಯ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಸಂಬಂಧಿತ ಏಜೆನ್ಸಿಗಳಿಗೆ ಸೂಚನೆ ನೀಡಿ ಎಂದು ಭಾರತ, ಪಾಕಿಸ್ತಾನ ಅಧಿಕಾರಿಗಳನ್ನು ಕೇಳಿಕೊಂಡಿತ್ತು. ಇಂತಹ ಕಿರುಕುಳದ ಘಟನೆಗಳು 1961ರ ರಾಜತಾಂತ್ರಿಕ ಸಂಬಂಧಗಳ ವಿಯೆನ್ನಾ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ ಮತ್ತು ಭಾರತೀಯ ಹೈಕಮಿಷನ್ ಅಧಿಕಾರಿಗಳು, ಸಿಬ್ಬಂದಿ ಮತ್ತು ಅವರ ಕುಟುಂಬಗಳ ಸುರಕ್ಷತೆಗೆ ಪಾಕಿಸ್ತಾನ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿತ್ತು. ಆದರೆ ಮತ್ತೆ ಅಂತದ್ದೇ ಘಟನೆಗಳು ಪುನರಾವರ್ತನೆಯಾಗುತ್ತಿವೆ.

ABOUT THE AUTHOR

...view details