ಬಾಗ್ದಾದ್(ಇರಾಕ್):ವಿದ್ಯುತ್ ಸಮಸ್ಯೆಯಿರುವ ಐದು ಪ್ರದೇಶಗಳಲ್ಲಿ ಸೌರ ವಿದ್ಯುತ್ ಸ್ಥಾವರಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಮೂಲದ ನವೀಕರಿಸಬಹುದಾದ ಇಂಧನ ಡೆವಲಪರ್ ಜೊತೆ ಇರಾಕ್ ಒಪ್ಪಂದಕ್ಕೆ ಸಹಿ ಹಾಕಿದೆ.
ಬಾಗ್ದಾದ್‌ನಲ್ಲಿ ಬುಧವಾರ ಇರಾಕ್ ಪ್ರಧಾನಿ ಮುಸ್ತಫಾ ಅಲ್-ಕಾಧಿಮಿ ಅವರ ಸಮ್ಮುಖದಲ್ಲಿ ಇರಾಕ್ ಅಧಿಕಾರಿಗಳು ಮತ್ತು ಮಸ್ದಾರ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು ಒಪ್ಪಂದಕ್ಕೆ ಸಹಿ ಹಾಕಿದ್ರು. ಒಪ್ಪಂದವು 1,000 ಮೆಗಾವ್ಯಾಟ್‌ಗಳ ವಿದ್ಯುತ್ ಉತ್ಪಾದನಾ ಸ್ಥಾವರ ನಿರ್ಮಿಸುವುದಾಗಿದೆ. ದಕ್ಷಿಣ ಇರಾಕ್‌ನ ಧಿ ಕರ್, ಮಧ್ಯ ಇರಾಕ್‌ನ ರಮಾಡಿ, ಉತ್ತರದಲ್ಲಿ ಮೊಸುಲ್ ಮತ್ತು ಆಗ್ನೇಯದಲ್ಲಿ ಅಮರ್ ಪ್ರಾಂತ್ಯಗಳಲ್ಲಿ ವಿದ್ಯುತ್ ಸ್ಥಾವರ ನಿರ್ಮಿಸಲಾಗುವುದು.