ಬಾಗ್ದಾದ್(ಇರಾಕ್): ಉತ್ತರ ಇರಾಕ್ನಲ್ಲಿ ಶುಕ್ರವಾರ ಶವಸಂಸ್ಕಾರದ ಮೆರವಣಿಗೆ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಹಲವು ಮಂದಿ ಮೃತಪಟ್ಟಿದ್ದಾರೆಂದು ಇಲ್ಲಿನ ಸೇನೆ ತಿಳಿಸಿದೆ. ಸಲಾಹುದ್ದೀನ್ ಪ್ರಾಂತ್ಯದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹಲವು ಜನರು ಮೃತಪಟ್ಟಿದ್ದು, ಅಂಕಿ-ಅಂಶಗಳು ಲಭ್ಯವಿಲ್ಲ ಎಂದು ಸೇನೆ ತಿಳಿಸಿದೆ.
ಆದರೆ, ಇರಾಕ್ನ ಭದ್ರತಾಪಡೆಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಘಟನೆಯಲ್ಲಿ ಕನಿಷ್ಠ ಎಂಟು ಜನರು ಮೃತಪಟ್ಟಿದ್ದಾರೆ. ಮೃತರಲ್ಲಿ ಪೊಲೀಸರು, ಸಾರ್ವಜನಿಕರು ಸೇರಿದ್ದಾರೆ ಎಂದು ತಿಳಿಸಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಸಂಘಟನೆ ಈ ದಾಳಿ ನಡೆಸಿದ್ದು, ತನಿಖೆ ಪೂರ್ಣಗೊಂಡ ಬಳಿಕ ಎಲ್ಲಾ ವಿವರ ನೀಡುವುದಾಗಿ ಸೇನೆ ಮಾಹಿತಿ ನೀಡಿದೆ. 2017 ರಿಂದೀಚೆಗೆ ಉತ್ತರ ಇರಾಕ್ ಐಎಸ್ ಚಟುವಟಿಕೆಯ ಹಾಟ್ ಸ್ಪಾಟ್ ಆಗಿದೆ.