ತೆಹ್ರಾನ್:ಅಮೆರಿಕದೊಂದಿಗಿನ ಸಂದಿಗ್ಧ ಪರಿಸ್ಥಿತಿ ನಡುವೆ ಇರಾನ್ ಎರಡು ಹೊಸ ಕ್ಷಿಪಣಿಗಳನ್ನು ಸಿದ್ಧಪಡಿಸಿದ್ದು, ಅವುಗಳಿಗೆ ಜನರಲ್ ಕಾಸಿಮ್ ಸುಲೇಮಾನಿ ಹಾಗೂ ಅಬು ಮಹ್ದಿ ಅಲ್-ಮುಹಂಡಿಸ್ ಅವರ ಹೆಸರಿಟ್ಟಿದೆ.
ಸುಲೇಮಾನಿ ಹೆಸರಿನಲ್ಲಿ ಹೊಸ ಕ್ಷಿಪಣಿ ಸಿದ್ಧಪಡಿಸಿದ ಇರಾನ್.. ಅಮೆರಿಕಕ್ಕೆ ಎಚ್ಚರಿಕೆ - ವೈಮಾನಿಕ ದಾಳಿ
ಕಳೆದ ಜನವರಿಯಲ್ಲಿ ಬಾಗ್ದಾದ್ ಏರ್ಪೋರ್ಟ್ನಲ್ಲಿ ಅಮೆರಿಕದ ಪಡೆಗಳು ನಡಸಿದ ವೈಮಾನಿಕ ದಾಳಿಯಲ್ಲಿ ಹತ್ಯೆಯಾದ ಜನರಲ್ ಕಾಸಿಮ್ ಸುಲೇಮಾನಿ ಹಾಗೂ ಅಬು ಮಹ್ದಿ ಅಲ್-ಮುಹಂಡಿಸ್ ಅವರ ಹೆಸರಿನಲ್ಲಿ ಇರಾನ್ ಹೊಸ ಕ್ಷಿಪಣಿಗಳನ್ನು ತಯಾರಿಸಿದೆ.
ರಾಷ್ಟ್ರೀಯ ರಕ್ಷಣಾ ಕೈಗಾರಿಕಾ ದಿನದ ಅಂಗವಾಗಿ ಇರಾನ್‌ನಲ್ಲಿ ಇಂದು 'ಹುತಾತ್ಮ ಹಜ್ ಕಾಸಿಮ್' ಹಾಗೂ 'ಹುತಾತ್ಮ ಅಬು ಮಹ್ದಿ' ಎಂಬ ನೌಕಾ ಕ್ರೂಸ್ ಕ್ಷಿಪಣಿ (naval cruise missile)ಗಳನ್ನು ಅನಾವರಣಗೊಳಿಸಲಾಯಿತು.
ಕಳೆದ ಜನವರಿಯಲ್ಲಿ ಬಾಗ್ದಾದ್ ಏರ್ಪೋರ್ಟ್ನಲ್ಲಿ ಅಮೆರಿಕದ ಪಡೆಗಳು ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾಕ್ ಹಾಗೂ ಇರಾನ್ನ ಹಶೆದ್ ಅಲ್-ಶಾಬಿ ಮಿಲಿಟರಿ ಪಡೆಯ ಮೇಜರ್ ಜನರಲ್ ಕಾಸಿಮ್ ಸುಲೇಮಾನಿ ಹತ್ಯೆಯಾಗಿದ್ದರು. ಘಟನೆಯಲ್ಲಿ ಇರಾಕಿ ಮಿಲಿಟರಿ ಪಡೆಯ (ಪಾಪ್ಯುಲರ್ ಮೊಬಿಲೈಸೇಶನ್ ಪಡೆ) ಕಮಾಂಡರ್ ಅಬು ಮಹ್ದಿ ಅಲ್-ಮುಹಂಡಿಸ್ ಅವರೂ ಬಲಿಯಾಗಿದ್ದರು. ಇವರ ಗೌರವಾರ್ಥವಾಗಿ ಹಾಗೂ ಅಮೆರಿಕಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಲು ತಮ್ಮ ನಾಯಕರ ಹೆಸರಿನಲ್ಲಿ ಇರಾನ್ ಕ್ಷಿಪಣಿಗಳನ್ನು ತಯಾರಿಸಿದೆ.