ಟೆಹ್ರಾನ್(ಇರಾನ್): ಆಫ್ಘನ್ನಲ್ಲಿ ಸರ್ಕಾರ ರಚಿಸಲು ತಾಲಿಬಾನ್ ಪರದಾಡುತ್ತಿರುವ ಈ ಸಮಯದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ದೇಶದ ಭವಿಷ್ಯ ನಿರ್ಧರಿಸಲು ಆಫ್ಘನ್ನಲ್ಲಿ ಚುನಾವಣೆ ನಡೆಸುವಂತೆ ಕರೆ ನೀಡಿದ್ದಾರೆ.
ಅಮೆರಿಕ ಸೇನೆ ವಾಪಸ್ ಆಗಿದ್ದು, ತಾಲಿಬಾನ್ ಅಧಿಪತ್ಯ ಸ್ಥಾಪಿಸಿದೆ. ಈ ಸಮಯದಲ್ಲಿ ಅಲ್ಲಿ ಚುನಾವಣೆ ನಡೆದರೆ ಶಾಂತಿ ನಿರ್ಮಾಣವಾಗುತ್ತದೆ ಎಂದು ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅಭಿಪ್ರಾಯಪಟ್ಟಿದ್ದಾರೆ.
ಆಫ್ಘನ್ ಜನರು ತಮ್ಮ ದೇಶದಲ್ಲಿ ಸರ್ಕಾರವನ್ನು ರಚಿಸಲು ಆದಷ್ಟು ಬೇಗ ಮತ ಚಲಾಯಿಸಬೇಕು ಎಂದು ಅವರು ಹೇಳಿದ್ದಾರೆ. ಜನರಿಂದ ಚುನಾಯಿತವಾದ ಸರ್ಕಾರ ಅಲ್ಲಿ ಸ್ಥಾಪನೆಯಾಗಬೇಕೆಂದು ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಆಫ್ಘನ್ನಲ್ಲಿ ಸರ್ಕಾರ ರಚಿಸಲು ತಾಲಿಬಾನ್ ಹೆಣಗಾಟ.. ಮುಂದಿನ ವಾರಕ್ಕೆ ಮುಂದೂಡಿಕೆ
ಇಸ್ಲಾಮಿಕ್ ರಿಪಬ್ಲಿಕ್ ಯಾವಾಗಲೂ ಅಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ನೆಲೆಸುವುದನ್ನು ಬಯಸುತ್ತಿದೆ. ಅಫ್ಘಾನಿಸ್ತಾನದಲ್ಲಿ ಜನರಿಂದ ಚುನಾಯಿತವಾದ ಸಾರ್ವಭೌಮತ್ವ ಸರ್ಕಾರವನ್ನು ನಾವು ಬೆಂಬಲಿಸುತ್ತೇವೆ ಎಂದು ಇಬ್ರಾಹಿಂ ಹೇಳಿದ್ದಾರೆ.