ಬರ್ಲಿನ್: ಇರಾನ್ ವಿದೇಶಾಂಗ ಸಚಿವ ಮೊಹಮ್ಮದ್ ಜವಾದ್ ಜರೀಫ್ ಆಸ್ಟ್ರಿಯಾ ಪ್ರವಾಸ ರದ್ದುಗೊಳಿಸಿದ್ದಾರೆ. ಹಮಾಸ್ ಉಗ್ರ ಗುಂಪಿನೊಂದಿಗಿನ ಇಸ್ರೇಲ್ ಸಂಘರ್ಷದಲ್ಲಿ ಒಗ್ಗಟ್ಟಿನ ಸಂಕೇತವಾಗಿ ಆಸ್ಟ್ರಿಯಾದ ಚಾನ್ಸೆಲರಿ ಮತ್ತು ವಿದೇಶಾಂಗ ಸಚಿವಾಲಯವು ಇಸ್ರೇಲಿ ಧ್ವಜವನ್ನು ಹಾರಿಸಿದ ನಂತರ ಇರಾನ್ ಈ ನಿರ್ಧಾರ ತೆಗೆದುಕೊಂಡಿದೆ.
ಇರಾನಿನ ವಿದೇಶಾಂಗ ಸಚಿವ ಮೊಹಮ್ಮದ್ ಜವಾದ್ ಜರೀಫ್, ಶನಿವಾರ ಬೆಳಗ್ಗೆ ಆಸ್ಟ್ರಿಯಾದ ಕೌಂಟರ್ ಅಲೆಕ್ಸಾಂಡರ್ ಸ್ಚಾಲನ್‌ಬರ್ಗ್ ರನ್ನು ಭೇಟಿ ಮಾಡಲಿದ್ದಾರೆ ಎಂದು ಆಸ್ಟ್ರಿಯನ್ ದಿನಪತ್ರಿಕೆಯೊಂದು ವರದಿ ಮಾಡಿತ್ತು. ಆದರೆ, ಇಸ್ರೇಲಿ ಧ್ವಜವನ್ನು ಹಾರಿಸುವ ಆಸ್ಟ್ರಿಯಾ ನಾಯಕರ ನಿರ್ಧಾರದಿಂದಾಗಿ ಇರಾನ್ ಈ ನಿರ್ಧಾರ ಕೈಗೊಂಡಿದೆ.