ಟೆಹರಾನ್ :ಉಕ್ರೇನಿಯನ್ ಪ್ರಯಾಣಿಕರ ವಿಮಾನವನ್ನು ಕ್ಷಿಪಣಿ (Missile) ಯಿಂದ ಹೊಡೆದುರುಳಿಸುವ ದೃಶ್ಯಗಳನ್ನು ಚಿತ್ರೀಕರಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಇರಾನ್ ಹೇಳಿದೆ. ಬಂಧನಕ್ಕೊಳಗಾದ ವ್ಯಕ್ತಿಯು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಆರೋಪಗಳನ್ನು ಎದುರಿಸಬೇಕಾಗುತ್ತದೆ ಎಂದು ವರದಿ ಮಾಡಿದೆ.
ಟೆಹ್ರಾನ್‌ನಿಂದ ಬುಧವಾರ ಟೇಕಾಫ್ ಆದ ನಂತರ ಫ್ಲೈಟ್ ಪಿಎಸ್-752 ಅನ್ನು ಹೊಡೆದುರುಳಿಸಲಾಯಿತು. ಘಟನೆಯಲ್ಲಿ ವಿಮಾನದಲ್ಲಿದ್ದ ಎಲ್ಲಾ 176 ಜನರು ಸಾವನ್ನಪ್ಪಿದರು.
ಇರಾನ್ ಇದೊಂದು ಆಕಸ್ಮಿಕ ಘಟನೆ ಎಂದೇ ಸಮರ್ಥಿಸಿಕೊಂಡಿತ್ತು. ಆದರೆ ಬಳಿಕ ತನ್ನ ಕಣ್ತಿಪ್ಪಿನಿಂದಾದ ಘಟನೆ ಎಂದು ಒಪ್ಪಿಕೊಂಡಿತ್ತು. ಆದರೆ ಈಗ, ಈ ಘಟನೆಯ ಬಗ್ಗೆ ಹಲವಾರು ಜನರನ್ನು ಬಂಧಿಸುವುದಾಗಿ ಘೋಷಿಸಿದೆ. ಅಧ್ಯಕ್ಷ ಹಸನ್ ರೂಹಾನಿ, ತನಿಖೆಯನ್ನು ‘ವಿಶೇಷ ನ್ಯಾಯಾಲಯ’ ನೋಡಿಕೊಳ್ಳಲಿದೆ ಎಂದೂ ಪ್ರಕಟಿಸಿದ್ದಾರೆ.
ಕಳೆದ ವಾರ ಕ್ಷಿಪಣಿಯು ವಿಮಾನವನ್ನು ಹೊಡೆಯುವ ವಿಡಿಯೋವನ್ನು ಪೋಸ್ಟ್ ಮಾಡಿದ ವ್ಯಕ್ತಿಯನ್ನು ಇರಾನ್ ಅಧಿಕಾರಿಗಳು ಸದ್ಯ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಇರಾನಿನ ಮಾಧ್ಯಮ ವರದಿ ಮಾಡಿದೆ.
ಇದಕ್ಕೂ ಮುನ್ನ ಮಂಗಳವಾರ, ಇರಾನಿನ ನ್ಯಾಯಾಂಗ ವಕ್ತಾರ ಘೋಲಮ್ ಹೋಸೇನ್ ಎಸ್ಮೇಲಿ ಅವರು ವಿಮಾನವನ್ನು ಉರುಳಿಸಿದ ಬಗ್ಗೆ ಹಲವಾರು ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮಾಹಿ ಹಂಚಿಕೊಂಡಿದ್ದಾರೆ.