ಕರ್ನಾಟಕ

karnataka

ETV Bharat / international

ಜಪಾನ್ ಪ್ರವಾಸ ರದ್ದುಗೊಳಿಸಿದ ಒಲಿಂಪಿಕ್ಸ್ ಕಮಿಟಿ ಅಧ್ಯಕ್ಷ ಥಾಮಸ್ ಬ್ಯಾಚ್! - ಟೋಕಿಯೊ ಒಲಿಂಪಿಕ್ಸ್

ಇಂಟರ್​ನ್ಯಾಷನಲ್ ಒಲಿಂಪಿಕ್ಸ್ ಕಮಿಟಿ (ಐಒಸಿ) ಅಧ್ಯಕ್ಷ ಥಾಮಸ್ ಬ್ಯಾಚ್ ತಮ್ಮ ಜಪಾನ್ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಬ್ಯಾಚ್ ಟೋಕಿಯೊಗೆ ಭೇಟಿ ನೀಡಿ, ಒಲಿಂಪಿಕ್ಸ್ ಸಿದ್ಧತೆ ಕುರಿತು ಚರ್ಚಿಸಬೇಕಿತ್ತು.

IOC's Thomas Bach cancels Japan trip because of virus cases
IOC's Thomas Bach cancels Japan trip because of virus cases

By

Published : May 10, 2021, 8:35 PM IST

ಟೋಕಿಯೊ (ಜಪಾನ್):ದೇಶದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಇಂಟರ್​ನ್ಯಾಷನಲ್ ಒಲಿಂಪಿಕ್ಸ್ ಕಮಿಟಿ (ಐಒಸಿ) ಅಧ್ಯಕ್ಷ ಥಾಮಸ್ ಬ್ಯಾಚ್ ಜಪಾನ್ ಪ್ರವಾಸವನ್ನು ರದ್ದುಗೊಳಿಸಿದ್ದಾರೆ ಎಂದು ಟೋಕಿಯೋ ಒಲಿಂಪಿಕ್ ಸಂಘಟನಾ ಸಮಿತಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಥಾಮಸ್ ಬ್ಯಾಚ್ ಮುಂದಿನ ಸೋಮವಾರ ಹಿರೋಷಿಮಾಗೆ ಭೇಟಿ ನೀಡಿ ಬಳಿಕ ಟೋಕಿಯೊಗೆ ಪ್ರಯಾಣಿಸಬೇಕಾಗಿತ್ತು.

ಟೋಕಿಯೊ ಮತ್ತು ದೇಶದ ಇತರ ಭಾಗಗಳಲ್ಲಿ ತುರ್ತು ಪರಿಸ್ಥಿತಿಯನ್ನು ಮೇ 31ರವರೆಗೆ ವಿಸ್ತರಿಸಿದ ಕಾರಣ ಈ ಪ್ರವಾಸವನ್ನು ರದ್ದುಗೊಳಿಸಲಾಗಿದೆ. ಹಿಂದಿನ ಆದೇಶದ ಪ್ರಕಾರ ತುರ್ತು ಪರಿಸ್ಥಿತಿ ನಾಳೆಗೆ ಕೊನೆಗೊಳ್ಳಬೇಕಿತ್ತು. ಆದರೆ ಇದನ್ನು ವಿಸ್ತರಿಸಲಾಗಿದೆ.

ಪದೇ ಪದೆ ಒಲಿಂಪಿಕ್ಸ್ ರದ್ದುಗೊಳ್ಳುವುದಿಲ್ಲ ಮತ್ತು ಸುರಕ್ಷಿತ ರೀತಿಯಲ್ಲಿ ಆಯೋಜಿಸಲಾಗುವುದು ಎಂದು ಸಂಘಟಕರು ಮತ್ತು ಐಒಸಿ ಹೇಳಿದೆ.

ಆದರೆ, ಸಾಂಕ್ರಾಮಿಕ ರೋಗದ ಮಧ್ಯದಲ್ಲಿ ಒಲಿಂಪಿಕ್ಸ್ ನಡೆಸುವ ಕುರಿತು ಜಪಾನ್‌ನಲ್ಲಿ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ಮತದಾನದಲ್ಲಿ ಶೇ60ರಷ್ಟು ಜಪಾನಿನ ಜನರು ಒಲಿಂಪಿಕ್ಸ್ ಅನ್ನು ರದ್ದುಗೊಳಿಸಬೇಕು ಅಥವಾ ಮುಂದೂಡಬೇಕು ಎಂದು ಹೇಳಿದ್ದಾರೆ.

ABOUT THE AUTHOR

...view details