ನೈಪಿತಾವ್ (ಮ್ಯಾನ್ಮಾರ್):ಮಿಲಿಟರಿ ಕಾರ್ಯಾಚರಣೆಯ ನಂತರ ಮ್ಯಾನ್ಮಾರ್ನಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿದ್ದು, ಸ್ಥಗಿತಗೊಂಡಿದ್ದ ಇಂಟರ್ನೆಟ್ ಸೇವೆಗಳನ್ನು ಮತ್ತೆ ಪುನರಾರಂಭಿಸಲಾಗಿದೆ ಎಂದು ಅಂತರ್ಜಾಲ ಸೇವೆಗಳ ವೀಕ್ಷಣಾ ಸಂಸ್ಥೆ ನೆಟ್ಬ್ಲಾಕ್ಸ್ ಸೋಮವಾರ ವರದಿ ಮಾಡಿದೆ.
ಸ್ಥಳೀಯ ಕಾಲಮಾನ ಬೆಳಗ್ಗೆ 9 ಗಂಟೆಗೆ ಅಂತರ್ಜಾಲ ಸೇವೆ ಪುನಾರಂಭವಾಗಿದೆ. ಅಂಕಿಅಂಶಗಳಲ್ಲಿ ಅಂತರ್ಜಾಲ ಬಳಕೆ ಏರುತ್ತಿರುವುದು ಗೊತ್ತಾಗುತ್ತಿದೆ. ಆದರೂ ಕೆಲವು ಬಳಕೆದಾರರಿಗೆ ಸಾಮಾಜಿಕ ಜಾಲತಾಣಗಳನ್ನು ಬಳಸಲು ನಿರ್ಬಂಧವಿದೆ ಎಂದು ಸ್ಪುಟ್ನಿಕ್ ವರದಿ ಮಾಡಿದ್ದನ್ನು ನೆಟ್ಬ್ಲಾಕ್ಸ್ ಉಲ್ಲೇಖಿಸಿದೆ.
ಇದನ್ನೂ ಓದಿ:ಸಾಫ್ಟ್‌ವೇರ್ ದೋಷದಿಂದಾಗಿ ವಾಹನಗಳನ್ನು ಹಿಂಪಡೆಯಲಿರುವ ಮರ್ಸಿಡಿಸ್!