ಕರ್ನಾಟಕ

karnataka

ಅಂತಾರಾಷ್ಟ್ರೀಯ ಶಾಂತಿ ಮತ್ತು ಸುವ್ಯವಸ್ಥೆ ವರ್ಷ-2021: ಇಲ್ಲಿದೆ ಟರ್ಕೆನಿಸ್ತಾನ್ ಪ್ರಮುಖ ಘೋಷಣೆಗಳು

ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿ ಟರ್ಕೆನಿಸ್ತಾನ್ ಪ್ರಾರಂಭಿಸಿದ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದ್ದು, 2021ರ ವರ್ಷವನ್ನು ‘ಅಂತಾರಾಷ್ಟ್ರೀಯ ಶಾಂತಿ ಮತ್ತು ಸುವ್ಯವಸ್ಥೆ ವರ್ಷ’ ಎಂದು ಘೋಷಿಸಿದೆ..

By

Published : Dec 30, 2020, 10:04 AM IST

Published : Dec 30, 2020, 10:04 AM IST

Updated : Dec 30, 2020, 10:24 AM IST

ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿ
ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿ

ಯುಎನ್ ಜನರಲ್ ಅಸೆಂಬ್ಲಿ ಟರ್ಕೆನಿಸ್ತಾನ್ ಪ್ರಾರಂಭಿಸಿದ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದ್ದು, 2021ರ ವರ್ಷವನ್ನು ‘ಅಂತಾರಾಷ್ಟ್ರೀಯ ಶಾಂತಿ ಮತ್ತು ಸುವ್ಯವಸ್ಥೆ ವರ್ಷ’ ಎಂದು ಘೋಷಿಸಿತು.

ವಿಶ್ವಸಂಸ್ಥೆಯ ಚಾರ್ಟರ್ ಮತ್ತು ಅದರ ಉದ್ದೇಶಗಳು ಮತ್ತು ತತ್ವಗಳನ್ನು ಪುನರುಚ್ಚರಿಸುವುದು ಮತ್ತು ವಿಶೇಷವಾಗಿ ಶಾಂತಿಯುತ ವಿಧಾನಗಳ ಮೂಲಕ ವಿವಾದಗಳನ್ನು ಬಗೆಹರಿಸುವ ಬದ್ಧತೆ ಮತ್ತು ನಂತರದ ಪೀಳಿಗೆಗಳನ್ನು ಯುದ್ಧದ ಉಪದ್ರವದಿಂದ ರಕ್ಷಿಸುವ ದೃಢ ನಿಶ್ಚಯ, ರಾಷ್ಟ್ರಗಳ ನಡುವೆ ಸ್ನೇಹ ಸಂಬಂಧಗಳನ್ನು ಬೆಳೆಸುವಲ್ಲಿ ವಿಶ್ವಸಂಸ್ಥೆಯ ಪ್ರಮುಖ ಪಾತ್ರವನ್ನು ಗುರುತಿಸುವುದು.

  • ಬಹುಪಕ್ಷೀಯತೆ ಮತ್ತು ರಾಜತಾಂತ್ರಿಕತೆಯ ವಿಧಾನವು ವಿಶ್ವಸಂಸ್ಥೆಯ ಮೂರು ಸ್ತಂಭಗಳ ಪ್ರಗತಿಯನ್ನು ಬಲಪಡಿಸಬಹುದು ಎಂದು ಒಪ್ಪಿಕೊಳ್ಳುವುದು, ಅವುಗಳೆಂದರೆ, ಸುಸ್ಥಿರ ಅಭಿವೃದ್ಧಿ, ಶಾಂತಿ ಮತ್ತು ಸುರಕ್ಷತೆ, ಮಾನವ ಹಕ್ಕುಗಳು. ಅವುಗಳು ಪರಸ್ಪರ ಸಂಬಂಧ ಹೊಂದಿವೆ ಮತ್ತು ಪರಸ್ಪರ ಬಲಪಡಿಸುತ್ತವೆ.
  • ಶಾಂತಿ ಸಂಸ್ಕೃತಿಯ ಕುರಿತಾದ ಘೋಷಣೆ ಮತ್ತು ಕಾರ್ಯಕ್ರಮದ ಪ್ರಾಮುಖ್ಯತೆಯನ್ನು ಗುರುತಿಸುವುದು, ಇದು ಅಂತಾರಾಷ್ಟ್ರೀಯ ಸಮುದಾಯಕ್ಕೆ ವಿಶೇಷವಾಗಿ ವಿಶ್ವಸಂಸ್ಥೆಯ ವ್ಯವಸ್ಥೆಗೆ ಶಾಂತಿ ಮತ್ತು ಅಹಿಂಸೆಯ ಸಂಸ್ಕೃತಿಯನ್ನು ಉತ್ತೇಜಿಸಲು ಸಾರ್ವತ್ರಿಕ ಆದೇಶವಾಗಿ ಕಾರ್ಯನಿರ್ವಹಿಸುತ್ತದೆ.
  • ಬಹುಪಕ್ಷೀಯತೆ ಮತ್ತು ರಾಜಕೀಯ ಸಂಭಾಷಣೆಯ ಮೂಲಕ ತಡೆಗಟ್ಟುವ ರಾಜತಾಂತ್ರಿಕತೆಯನ್ನು ಉತ್ತೇಜಿಸುವ ಮತ್ತು ಬಲಪಡಿಸುವ ತುರ್ತು ಅಗತ್ಯವನ್ನು ಗುರುತಿಸುವುದು.
  • ಶಾಂತಿ ಮತ್ತು ನಂಬಿಕೆಯ ವ್ಯತ್ಯಾಸಗಳನ್ನು ಒಪ್ಪಿಕೊಳ್ಳುವುದು ಮತ್ತು ಇತರರ ಘೋಷಣೆಗಳನ್ನು ಆಲಿಸುವುದು, ಗುರುತಿಸುವುದು, ಗೌರವಿಸುವುದು, ಜೊತೆಗೆ ಶಾಂತಿಯುತ ಮತ್ತು ಏಕೀಕೃತ ರೀತಿಯಲ್ಲಿ ಜೀವಿಸುವುದು.
  • ಅಂತಾರಾಷ್ಟ್ರೀಯ, ಪ್ರಾದೇಶಿಕ ಮತ್ತು ಉಪಪ್ರಾದೇಶಿಕ ಸಂಸ್ಥೆಗಳ ಪಾತ್ರವನ್ನು ಅವರ ಆದೇಶಗಳಿಗೆ ಅನುಗುಣವಾಗಿ, ಶಾಂತಿಯ ಉತ್ತೇಜನ ಮತ್ತು ಸಂರಕ್ಷಣೆಯಲ್ಲಿ ಗುರುತಿಸುವುದು, ಪರಸ್ಪರ ತಿಳುವಳಿಕೆ ಮತ್ತು ಸಹಕಾರದ ಮನೋಭಾವದಲ್ಲಿ ಸಂಘರ್ಷಗಳನ್ನು ಪರಿಹರಿಸುವ ಸಕಾರಾತ್ಮಕ ಪ್ರಕ್ರಿಯೆ ಅಗತ್ಯವಿರುತ್ತದೆ ಎಂಬುದನ್ನು ಗುರುತಿಸುವುದು
  • ಶಾಂತಿಯನ್ನು ಕಾಪಾಡುವ ಸಲುವಾಗಿ, ಸಂಘರ್ಷಗಳ ಶಾಂತಿಯುತ ಇತ್ಯರ್ಥವನ್ನು ಉತ್ತೇಜಿಸಲು ವಿಶ್ವಸಂಸ್ಥೆಯ ಪ್ರಯತ್ನಗಳನ್ನು ಬೆಂಬಲಿಸುವುದು ಮತ್ತು ಮಹತ್ವವನ್ನು ಸಾರುವುದು,
  • ಅಂತಾರಾಷ್ಟ್ರೀಯ ವರ್ಷಗಳ ಘೋಷಣೆಯ ಕುರಿತು 15 ಡಿಸೆಂಬರ್ 1998 ಮತ್ತು 20 ಡಿಸೆಂಬರ್ 2006 ರಂದು ತನ್ನ ನಿರ್ಣಯಗಳನ್ನು ಪುನರುಚ್ಚರಿಸುವುದು,
  • ಯುನೈಟೆಡ್ ನೇಷನ್ಸ್ ಮಿಲೇನಿಯಮ್ ಡಿಕ್ಲರೇಶನ್ "ಸುಸ್ಥಿರ ಅಭಿವೃದ್ಧಿಗಾಗಿ 2030 ಕಾರ್ಯಸೂಚಿ" ನಿರ್ಣಯವನ್ನು 2 ಮತ್ತು 25 ಸೆಪ್ಟೆಂಬರ್ 2015ರರಂದು ತಿಳಿಸುವುದು.
  • ಶಾಂತಿಯ ಸಂಸ್ಕೃತಿಯನ್ನು ಮುನ್ನಡೆಸಲು ನಾಗರಿಕ ಸಮಾಜ ಸಂಸ್ಥೆಗಳು ನೀಡುವ ಸಹಕಾರವನ್ನು ಪ್ರೋತ್ಸಾಹಿಸುವುದು,

"ಅಂತಾರಾಷ್ಟ್ರೀಯ ಶಾಂತಿ ಮತ್ತು ಸುವ್ಯವಸ್ಥೆ ವರ್ಷ-2021"ರ ಘೋಷಣೆಗಳು

  • ರಾಷ್ಟ್ರಗಳ ನಡುವೆ ಶಾಂತಿ ಮತ್ತು ವಿಶ್ವಾಸವನ್ನು ಉತ್ತೇಜಿಸಲು ಅಂತಾರಾಷ್ಟ್ರೀಯ ಸಮುದಾಯದ ಪ್ರಯತ್ನಗಳನ್ನು ಸಜ್ಜುಗೊಳಿಸುವ ಸಾಧನ
  • ಸುಸ್ಥಿರ ಅಭಿವೃದ್ಧಿ, ಶಾಂತಿ ಮತ್ತು ಸುರಕ್ಷತೆ, ಮಾನವ ಹಕ್ಕುಗಳನ್ನು ಉತ್ತೇಜಿಸುವ ಮೌಲ್ಯವಾಗಿ ರಾಷ್ಟ್ರಗಳ ನಡುವೆ ಶಾಂತಿ ಮತ್ತು ವಿಶ್ವಾಸವನ್ನು ಉತ್ತೇಜಿಸುವುದನ್ನು ಮುಂದುವರಿಸಲು ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ.
  • ಶೈಕ್ಷಣಿಕ ಮತ್ತು ಸಾರ್ವಜನಿಕ ಜಾಗೃತಿ ಮೂಡಿಸುವ ಚಟುವಟಿಕೆಗಳ ಮೂಲಕ ಶಾಂತಿ ಮತ್ತು ಸುವ್ಯವಸ್ಥೆಯ ಅನುಕೂಲಗಳನ್ನು ಪ್ರಸಾರ ಮಾಡುವುದು

ಪ್ರಸ್ತುತ ನಿರ್ಣಯವನ್ನು ಎಲ್ಲಾ ಸದಸ್ಯ ರಾಷ್ಟ್ರಗಳು, ವಿಶ್ವಸಂಸ್ಥೆಯ ವ್ಯವಸ್ಥೆಯ ಸಂಸ್ಥೆಗಳು, ಇತರ ಅಂತಾರಾಷ್ಟ್ರೀಯ-ಪ್ರಾದೇಶಿಕ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು ಮತ್ತು ವ್ಯಕ್ತಿಗಳು ಸೇರಿದಂತೆ ನಾಗರಿಕ ಸಮಾಜದ ಗಮನಕ್ಕೆ ತರಲು ಪ್ರಧಾನ ಕಾರ್ಯದರ್ಶಿ ಕೋರಿದ್ದಾರೆ. ಪ್ರಸ್ತುತ ನಿರ್ಣಯದ ಅನುಷ್ಠಾನದಿಂದ ಉಂಟಾಗಬಹುದಾದ ಎಲ್ಲಾ ಚಟುವಟಿಕೆಗಳ ವೆಚ್ಚವನ್ನು ಸ್ವಯಂಪ್ರೇರಿತ ಕೊಡುಗೆಗಳಿಂದ ಪೂರೈಸಬೇಕು ಎಂದು ಹೇಳಿದೆ.

ಟರ್ಕೆನಿಸ್ತಾನ್ ಪ್ರಮುಖ ನೀತಿಗಳು

  • ತಟಸ್ಥ ಟರ್ಕೆನಿಸ್ತಾನದ ವಿದೇಶಾಂಗ ನೀತಿಯ ಪ್ರಮುಖ ಗುರಿಗಳಲ್ಲಿ ಒಂದು, ಪ್ರದೇಶ ಮತ್ತು ವಿಶ್ವದಾದ್ಯಂತ ಉನ್ನತ ಮಟ್ಟದ ಸುರಕ್ಷತೆ ಮತ್ತು ಸ್ಥಿರತೆಯನ್ನು ಖಚಿತಪಡಿಸುವುದು.
  • ಅಂತಾರಾಷ್ಟ್ರೀಯ ಉಪಕ್ರಮಗಳು ತಟಸ್ಥ ಕಾನೂನು ಸ್ಥಾನಮಾನದ ಪ್ರಾಯೋಗಿಕ ಅನುಷ್ಠಾನ, ಶಾಂತಿಯ ರಕ್ಷಣೆ ಮತ್ತು ಪರಸ್ಪರ ಸಂಸ್ಕೃತಿಯ ವರ್ಧನೆಗೆ ನಿರ್ದಿಷ್ಟ ಪ್ರಾಮುಖ್ಯತೆಯನ್ನು ಹೊಂದಿವೆ
  • ಸಕಾರಾತ್ಮಕ ತಟಸ್ಥತೆಯ ತತ್ವಗಳ ಆಧಾರದ ಮೇಲೆ ಟರ್ಕೆನಿಸ್ತಾನದ ವಿದೇಶಾಂಗ ನೀತಿಯನ್ನು ಟರ್ಕಮನ್​ ಜನರ ಮೂಲ ಲಕ್ಷಣಗಳು ಮತ್ತು ಸಂಪ್ರದಾಯಗಳ ಸುತ್ತಲೂ ನಿರ್ಮಿಸಲಾಗಿದೆ.
  • ಅಂತಾರಾಷ್ಟ್ರೀಯ ಸಹಕಾರವನ್ನು ವಿಸ್ತರಿಸಲು ಮತ್ತು ಸಾರ್ವತ್ರಿಕ ಪ್ರಗತಿಯ ಸಮಸ್ಯೆಗಳಿಗೆ ಸಕಾರಾತ್ಮಕ ಪರಿಹಾರಗಳನ್ನು ಹುಡುಕುವ ನಮ್ಮ ದೇಶದ ಈ ಕಾರ್ಯತಂತ್ರವನ್ನು ವಿಶ್ವ ಸಮುದಾಯವು ಉತ್ಸಾಹದಿಂದ ಬೆಂಬಲಿಸುತ್ತದೆ.
  • ಸಾರ್ವತ್ರಿಕ ಶಾಂತಿ, ಭದ್ರತೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಖಾತರಿಪಡಿಸುವ ಹೆಸರಿನಲ್ಲಿ ಜಾರಿಗೊಳಿಸಲಾಗುತ್ತಿರುವ ಉಪಕ್ರಮವು , ತಟಸ್ಥ ವಿದೇಶಾಂಗ ನೀತಿಗೆ ಅಂತಾರಾಷ್ಟ್ರೀಯ ಸಮುದಾಯವು ನೀಡುವ ಸಂಪೂರ್ಣ ಬೆಂಬಲಕ್ಕೆ ಸಾಕ್ಷಿಯಾಗಿದೆ.
  • ಪ್ರಸ್ತುತ ಕಠಿಣ ಪರಿಸ್ಥಿತಿಗಳಲ್ಲಿ, ಟರ್ಕೆನಿಸ್ತಾನವು ಶಾಂತಿಯನ್ನು ಕಾಪಾಡಿಕೊಳ್ಳುವುದು, ಪರಿಸರವನ್ನು ರಕ್ಷಿಸುವುದು, ಆರ್ಥಿಕ, ಇಂಧನ ಮತ್ತು ಆಹಾರ ಸುರಕ್ಷತೆಯನ್ನು ಖಾತರಿಪಡಿಸುವ ಮತ್ತು ಪರಿಣಾಮಕಾರಿಯಾಗಿ ಅಂತಾರಾಷ್ಟ್ರೀಯ ರಂಗದಲ್ಲಿ ಐತಿಹಾಸಿಕ ಮಹತ್ವದ ಮಾನವ-ರಾಜಕೀಯ ಉಪಕ್ರಮಗಳನ್ನು ಉತ್ತೇಜಿಸುತ್ತಿದೆ.
  • ತಟಸ್ಥ ಕಾನೂನು ಸ್ಥಾನಮಾನ ಮತ್ತು ಅಂತಾರಾಷ್ಟ್ರೀಯ ಕಟ್ಟುಪಾಡುಗಳಿಂದ ಮಾರ್ಗದರ್ಶಿಸಲ್ಪಟ್ಟ ನಮ್ಮ ದೇಶವು ಎಲ್ಲಾ ಸಮಸ್ಯೆಗಳನ್ನು ರಾಜಕೀಯ ಮತ್ತು ರಾಜತಾಂತ್ರಿಕ ವಿಧಾನಗಳಿಂದ, ಮುಖ್ಯವಾಗಿ ವಿಶ್ವಸಂಸ್ಥೆ ಮತ್ತು ಇತರ ಪ್ರಮುಖ ಅಧಿಕೃತ ಸಂಸ್ಥೆಗಳ ಮೂಲಕ ಪರಿಹರಿಸಲು ಸಲಹೆ ನೀಡುತ್ತದೆ.
  • ಟರ್ಕೆನಿಸ್ತಾನ್​ ತಟಸ್ಥತೆ, ಶಾಂತಿಯುತತೆ, ಉತ್ತಮ ನೆರೆಹೊರೆಯ ತತ್ವಗಳು ಮತ್ತು ಅದರ ವಿದೇಶಾಂಗ ನೀತಿಯ ಆಧಾರವಾಗಿ ಉಳಿದಿದೆ ಎಂಬುದನ್ನು ಖಚಿತಪಡಿಸುತ್ತದೆ.
Last Updated : Dec 30, 2020, 10:24 AM IST

ABOUT THE AUTHOR

...view details