ಜಕಾರ್ತ(ಇಂಡೋನೇಷ್ಯಾ) :ಜಕಾರ್ತದಿಂದ ಪಶ್ಚಿಮ ಕಾಲಿಮಂತನ್ ಪ್ರಾಂತ್ಯದ ಪೊಂಟಿಯಾನಕ್ ಕಡೆಗೆ ಹೊರಟಿದ್ದ ಶ್ರೀವಿಜಯ ವಿಮಾನ ಸಮುದ್ರದಲ್ಲಿ ಪತನವಾಗಿ ತಿಂಗಳ ಬಳಿಕ ವಿಮಾನದಲ್ಲಿದ್ದ ಮತ್ತೆ ಮೂರು ಮೃತದೇಹಗಳ ಗುರುತು ಪತ್ತೆ ಮಾಡಲಾಗಿದೆ. ಇದರಲ್ಲಿ ಪೈಲಟ್ ಕ್ಯಾಪ್ಟನ್ ಅಫ್ವಾನ್ ಆರ್ಝಡ್ ಸಹ ಒಬ್ಬರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇವರಲ್ಲದೆ ಸಹೋದರರ ಮೃತದೇಹವನ್ನು ಇಂಡೋನೇಷ್ಯನ್ ಪೊಲೀಸರು ಗುರುತಿಸಿದ್ದು, ಅವರು ಸುಯಾಂಟೋ ಮತ್ತು ರಿಯಾಂಟೋ ಸಹೋದರರು ಎಂದು ಗುರುತಿಸಲಾಗಿದೆ.
62 ಮಂದಿ ಪ್ರಯಾಣಿಕರಿದ್ದ ಶ್ರೀವಿಜಯ ಏರ್ ಫ್ಲೈಟ್ ಎಸ್‌ಜೆ 182 ಪಶ್ಚಿಮ ಕಾಲಿಮಂಟನ್ ಪ್ರಾಂತ್ಯದ ಪೊಂಟಿಯಾನಕ್ ನಗರಕ್ಕೆ ತಲುಪುವ ಮಾರ್ಗಮಧ್ಯೆ ಪತನವಾಗಿತ್ತು.