ಕರ್ನಾಟಕ

karnataka

ಇಂಡೋನೇಷ್ಯಾ ಭೂಕಂಪ: ಸಾವಿನ ಸಂಖ್ಯೆ 91ಕ್ಕೆ ಏರಿಕೆ

By

Published : Jan 21, 2021, 6:03 PM IST

ಸಾಲು ಸಾಲು ಭೂಕಂಪಗಳಿಗೆ ಇಂಡೋನೇಷ್ಯಾ ತತ್ತರಿಸಿದ್ದು, ಕಳೆದ 30 ದಿನಗಳಲ್ಲಿ 6.0 ಅಥವಾ ಅದಕ್ಕಿಂತ ಹೆಚ್ಚಿನ ತೀವ್ರತೆಯ ಮೂರು ಭೂಕಂಪಗಳು, 5.0 ಮತ್ತು 6.0 ತೀವ್ರತೆ ನಡುವೆ 22 ಭೂಕಂಪಗಳು ಸಂಭವಿಸಿವೆ.

Indonesia quake death toll climbs to 91
ಇಂಡೋನೇಷ್ಯಾ ಭೂಕಂಪ

ಜಕಾರ್ತಾ: ಇಂಡೋನೇಷ್ಯಾವನ್ನೇ ನಲುಗಿಸಿದ ಭೂಕಂಪದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ 91ಕ್ಕೆ ಏರಿಕೆಯಾಗಿದೆ. 1,172 ಮಂದಿ ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಂಡಳಿ ಮಾಹಿತಿ ನೀಡಿದೆ.

ಜನವರಿ 16ರಂದು ಇಂಡೋನೇಷ್ಯಾದ ಸುಲವೇಸಿ ಪ್ರಾಂತ್ಯದಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದಕ್ಕೂ ಮುನ್ನ ಅಂದರೆ ಜ.14ರಂದು ದಕ್ಷಿಣ ಕಾಲಿಮಂತನ್ ಪ್ರಾಂತ್ಯದಲ್ಲಿ ವರುಣನ ಆರ್ಭಟ ಪ್ರವಾಹ ಪರಿಸ್ಥಿತಿ ತಂದೊಡ್ಡಿತ್ತು. ಪ್ರವಾಹ ಸಂಬಂಧ ಘಟನೆಯಿಂದಾಗಿಯೇ 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.

ಇಂಡೋನೇಷ್ಯಾ ಭೂಕಂಪ

ಸುಲವೇಸಿ ಪ್ರಾಂತ್ಯದಲ್ಲಿ 14 ದಿನಗಳ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದ್ದು, ಭೂಕಂಪ ಪೀಡಿತ ಸ್ಥಳಗಳಿಗೆ ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೊಡೊ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆ-ಮಠ ಕಳೆದುಕೊಂಡು ಪರಿಹಾರ ಕೇಂದ್ರಗಳಲ್ಲಿರುವವರಿಗೆ ಸರ್ಕಾರ ಆರ್ಥಿಕ ನೆರವು ನೀಡಲಿದೆ ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಅಮೆರಿಕದ ಮಿಲಿಟರಿ ಹೆಲಿಕಾಪ್ಟರ್​ ಪತನ: ಮೂವರ ದುರ್ಮರಣ

ಕಳೆದ 30 ದಿನಗಳಲ್ಲಿ ಇಂಡೋನೇಷ್ಯಾದಲ್ಲಿ ರಿಕ್ಟರ್​ ಮಾಪಕದಲ್ಲಿ 6.0 ಅಥವಾ ಅದಕ್ಕಿಂತ ಹೆಚ್ಚಿನ ತೀವ್ರತೆಯ ಮೂರು ಭೂಕಂಪಗಳು, 5.0 ಮತ್ತು 6.0 ತೀವ್ರತೆ ನಡುವೆ 22 ಭೂಕಂಪಗಳು, 4.0 ಮತ್ತು 5.0 ತೀವ್ರತೆಯ ನಡುವೆ 143 ಭೂಕಂಪಗಳು, 3.0 ಮತ್ತು 4.0 ರ ನಡುವೆ 367 ಭೂಕಂಪಗಳು ಮತ್ತು 2.0 ಮತ್ತು 3.0 ರ ನಡುವೆ 247 ಭೂಕಂಪಗಳು ಸಂಭವಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details