ಕರ್ನಾಟಕ

karnataka

ETV Bharat / international

ಭಾರತದ ಪ್ಯಾಲೆಸ್ಟೈನ್​​​ ರಾಯಭಾರಿ ಮುಕುಲ್ ಆರ್ಯ ನಿಗೂಢ ಸಾವು

ಪ್ಯಾಲೆಸ್ಟೈನ್​​​​ನಲ್ಲಿ​ ದ್ದ ಭಾರತದ ರಾಯಭಾರಿ ಮುಕುಲ್ ಆರ್ಯ ನಿಧನರಾಗಿದ್ದಾರೆ. ರಾಯಭಾರಿ ಕಚೇರಿಯಲ್ಲಿಯೇ ಅವರ ಮೃತದೇಹ ಪತ್ತೆಯಾಗಿದ್ದು, ಈ ಕುರಿತು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಸಂತಾಪ ಸೂಚಿಸಿದ್ದಾರೆ.

ಭಾರತದ ಪ್ಯಾಲೆಸ್ಟೇನ್​ ರಾಯಭಾರಿ ಮುಕುಲ್ ಆರ್ಯ
ಭಾರತದ ಪ್ಯಾಲೆಸ್ಟೇನ್​ ರಾಯಭಾರಿ ಮುಕುಲ್ ಆರ್ಯ

By

Published : Mar 7, 2022, 9:21 AM IST

ಪ್ಯಾಲೆಸ್ಟೈನ್: ಪ್ಯಾಲೆಸ್ಟೈನ್​​​​ಲ್ಲಿದ್ದ ಭಾರತದ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮುಕುಲ್ ಆರ್ಯ ಅವರ ಮೃತದೇಹ ಭಾನುವಾರ ರಾಮಲ್ಲಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಪತ್ತೆಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಆರ್ಯ ನಿಧನದ ಕುರಿತು ಟ್ವೀಟ್​ ಮಾಡಿರುವ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್, ರಮಲ್ಲಾದಲ್ಲಿ ಭಾರತೀಯ ರಾಯಭಾರಿಯಾಗಿರುವ ಮುಕುಲ್ ಆರ್ಯ ಅವರ ಸಾವು ತೀವ್ರ ಆಘಾತ ತಂದಿದೆ. ಆರ್ಯ ಕುಟುಂಬಕ್ಕೆ ಅವರ ನಿಧನದ ನೋವು ಮರೆಸುವ ಶಕ್ತಿಯನ್ನ ದೇವರು ಕರುಣಿಸಲಿ. ಅವರೊಬ್ಬ ಪ್ರತಿಭಾವಂತ ಅಧಿಕಾರಿ ಎಂದು ಬಣ್ಣಿಸಿ ಸಂತಾಪ ಸೂಚಿಸಿದ್ದಾರೆ.

ವಿದೇಶಾಂಗ ಸಚಿವ ಎಸ್.ಜೈಶಂಕರ್ ಟ್ವೀಟ್​

2008ನೇ ಬ್ಯಾಚ್ ಭಾರತೀಯ ವಿದೇಶಾಂಗ ಸೇವಾ ಅಧಿಕಾರಿಯಾಗಿರುವ ಮುಕುಲ್ ಆರ್ಯ ಅವರ ಸಾವಿಗೆ ಕಾರಣ ತಿಳಿದು ಬಂದಿಲ್ಲ.

ಇದನ್ನೂ ಓದಿ:ಕೀವ್​ನಲ್ಲಿ ಗುಂಡೇಟು ತಗುಲಿ ಗಾಯಗೊಂಡಿದ್ದ ವಿದ್ಯಾರ್ಥಿ ಇಂದು ಭಾರತಕ್ಕೆ ಆಗಮನ

For All Latest Updates

ABOUT THE AUTHOR

...view details